Tuesday, June 28, 2022

Latest Posts

ಪುರುಷ ಶೌಚಾಲಯದಲ್ಲಿ ಮಹಿಳಾ ಪೇದೆ ಫೋನ್ ನಂಬರ್: ಆರೋಪಿ ವಿರುದ್ಧ ಎಫ್‌ಐಆರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಿಳಾ ಪೊಲೀಸ್ ಪೇದೆ ಫೋನ್ ನಂಬರ್ ಅನ್ನು ಕಡೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪುರುಷ ಶೌಚಾಲಯದಲ್ಲಿ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಮಹಿಳೆ ನಗರದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಈ ಬಗ್ಗೆ ನೀಡಿರುವ ದೂರು ಆಧರಿಸಿ ಕಡೂರಿನ ನಿವಾಸಿಯಾಗಿರುವ ಆರೋಪಿ ಸತೀಶ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಡಿ.ಇಡ್ ವ್ಯಾಸಂಗ ವೇಳೆ ಸಹಪಾಠಿಯಾಗಿದ್ದ ಸತೀಶ್, ಸಂತ್ರಸ್ತೆಗೆ ಅನವಶ್ಯಕವಾಗಿ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸುವುದು ಮಾಡುತ್ತಿದ್ದ. ಸಂತ್ರಸ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಸತೀಶ್ ಮೊಬೈಲ್‌ ನಂಬರ್‌ನ್ನು ಪುರುಷ ಶೌಚಾಲಯದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.

ಅನೇಕರು ಸಂತ್ರಸ್ತೆಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದರು, ಮೊಬೈಲ್ ನಂಬರ್ ಎಲ್ಲಿ ಸಿಕ್ಕಿತೆಂದು ವಿಚಾರಿಸಿದಾಗ ವಿಷಯ ಹೊರಬಿದ್ದಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss