ನವದೆಹಲಿ: ಪುಲ್ವಾಮಾ ದಾಳಿಯ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಒಟ್ಟು 13,500 ಪುಟಗಳ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗಿದೆ.
ನಿಷೇಧಿತ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಶಂಕಿತರಿಗೆ ಆಶ್ರಯ ನೀಡಿದ ಹಾಗೂ 200 ಕೆ.ಜಿ ಸ್ಫೋಟಕಗಳನ್ನು ಒಯ್ದು ಕೃತ್ಯ ಎಸಗಿದ್ದ, ಆತ್ಮಹತ್ಯಾ ಬಾಂಬರ್ ಅದಿಲ್ ದರ್ನ ಕೊನೆಯ ವಿಡಿಯೊ ಮಾಡಿದ್ದವರ ಹೆಸರುಗಳನ್ನು ದೋಷಾರೋಪ ಪಟ್ಟಿ ಒಳಗೊಂಡಿದೆ.
ಉಗ್ರರು ಕೃತ್ಯ ಎಸಗಲು ಉನ್ನತ ಸಾಮರ್ಥ್ಯದ ಬ್ಯಾಟರಿ, ಫೋನ್ ಮತ್ತು ಕೆಲ ರಾಸಾಯನಿಕ ವಸ್ತುಗಳ ಖರೀದಿಗೆ ಇ-ವೇದಿಕೆಗಳನ್ನು ಬಳಸಿದ್ದು ತನಿಖೆಯಿಂದ ತಿಳಿದುಬಂದಿತ್ತು.
ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಜನರನ್ನು ಎನ್ಐಎ ಬಂಧಿಸಿದೆ.ಮೃತಪಟ್ಟಿರುವ ಏಳು ಮಂದಿ ಉಗ್ರರು ಹಾಗೂ ತಲೆ ಮರೆಸಿಕೊಂಡಿರುವ ನಾಲ್ವರ ಹೆಸರನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ಉಗ್ರ ಸಂಘಟನೆಯು ಆತ್ಮಹತ್ಯಾ ದಾಳಿ ನಡೆಸಿದ್ದು, 40 ಯೋಧರು ಮೃತಪಟ್ಟಿದ್ದರು.