ಪೂಂಚ್: ಪಾಕಿಸ್ತಾನದಿಂದ ಪ್ರತಿದಿನ ಕದನ ವಿರಾಮ ಉಲ್ಲಂಘನೆ ಮಾಡುತ್ತಾ ತನ್ನ ಉದ್ದಟತನ ಪ್ರದರ್ಶಿಸುತ್ತಿದೆ. ಭಾರತದ ಒಳ ನುಸುಳಲು ಪಾಕಿಸ್ತಾನ ಅಪ್ರಚೋಧಿತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಾಕೋಟ್ ನಲ್ಲಿ ಪಾಕಿಸ್ತಾನ ಅಪ್ರಚೋಧಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದು, ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬುಧವಾರ ಎಲ್ ಒಸಿಯ ಭಾರಮುಲ್ಲಾದಲ್ಲಿ ಕದನ ವಿರಾಮ ಉಲ್ಲಂಘಿಸಿ ಶಸ್ತ್ರಾಸ್ತ್ರಗಳು ಹಾಗೂ ಗಾರೆಯ ಮೂಲಕ ದಾಳಿ ನಡೆಸಿದ್ದು, ಓರ್ವ ಸೇನಾ ಪೋರ್ಟರ್ ಮೃತಪಟ್ಟಿದ್ದರು.
Jammu & Kashmir: An Army personnel lost his life in ceasefire violation by Pakistan in Balakot sector of Poonch. More details awaited.
— ANI (@ANI) August 1, 2020