Thursday, July 7, 2022

Latest Posts

ಪೂಂಚ್ ಜಿಲ್ಲೆಯ ಲೈನ್ ಆಫ್​ ಕಂಟ್ರೋಲ್​ ಬಳಿ ಸ್ಫೋಟ: ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಗಳಿಗೆ ಗಾಯ

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಲೈನ್ ಆಫ್​ ಕಂಟ್ರೋಲ್​ ಬಳಿ ಸ್ಫೋಟ ಸಂಭವಿಸಿದ್ದು, ಇಬ್ಬರು ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆಯಂಟಿ ಪರ್ಸೋನೆಲ್ ಮೈನ್ ಭೂಮಿಯಲ್ಲಿ ಹುದುಗಿಸುವ ಸ್ಫೋಟಕವಾಗಿದ್ದು, ಮಿಲಿಟರಿ ಟ್ಯಾಕ್​ಗಳ ವಿರುದ್ಧ ಹಾಗೂ ವಾಹನಗಳ ವಿರುದ್ಧ ಬಳಕೆಯಾಗುತ್ತವೆ.
ಎಲ್ ಒ ಸಿ ಯ ಬಾಲ್​ಕೋಟ್​ ಸೆಕ್ಟರ್​ನಲ್ಲಿ ಸಿಬ್ಬಂದಿ ಗಸ್ತು ತಿರುಗುವ ವೇಳೆಯಲ್ಲಿ ಹುಡುಗಿಸಿ ಇಡಲಾಗಿದ್ದ ಸ್ಫೋಟಕ ಸಿಡಿದಿದೆ. ಈ ವೇಳೆ ಸೇನಾ ಸಿಬ್ಬಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss