Sunday, July 3, 2022

Latest Posts

ಪೂಜೆ ಏಕೆ ಮಾಡಬೇಕು? ಪೂಜೆ ಮಾಡುವುದರಿಂದ ಮನಸ್ಸಿಗೆ, ದೇಹಕ್ಕೆ ಏನಾಗುತ್ತದೆ?

ಪೂಜೆ ಏಕೆ ಮಾಡಬೇಕು? ಭಗವಂತನ ಮುಂದೆ ಕೈಜೋಡಿಸಿ ಏಕೆ ನಿಲ್ಲಬೇಕು? ಪ್ರತಿದಿನ ನಾವು ಪೂಜೆ ಮಾಡುತ್ತೇವೆ. ಮನಸ್ಸಿಗೆ ನೆಮ್ಮದಿ ಇಲ್ಲದಾಗ ದೇವಸ್ಥಾನಕ್ಕೆ ಹೋಗಿ ಕುಳಿತು ಮನಸ್ಸು ಹಗುರ ಮಾಡಿಕೊಂಡು ಬರುತ್ತೇವೆ. ದೇವರ ಮನೆಯಲ್ಲಿ ಪ್ರತಿದಿನ ಐದು ನಿಮಿಷ ಕುಳಿತೆದ್ದರೂ ನಮ್ಮ ದೇಹದಲ್ಲಿ ಬದಲಾವಣೆ ಕಾಣುತ್ತದೆ.ಸಕಾರಾತ್ಮಕ ಶಕ್ತಿ ನಮ್ಮೊಳಗೆ ಹರಿಯುತ್ತದೆ. ಪೂಜೆ ಮಾಡುವುದರಿಂದ ಭಕ್ತಿಯಿಂದ ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ನೋಡಿ..

  • ನಿಮಗೆ ನೀವು ಹತ್ತಿರ ಬರುವ ಸಮಯ: ಭಕ್ತಿಯಿಂದ ಪೂಜೆ ಮಾಡುವುದರಿಂದ ನಿಮಗೆ ಏಕಾಗ್ರತೆ ಬರುತ್ತದೆ. ದೇವರ ಮುಂದೆ ನಿಜಕ್ಕೂ ನಿಮಗೇನು ಬೇಕು ಎನ್ನುವುದನ್ನು ನೀವು ಕೇಳಿಕೊಳ್ಳುತ್ತೀರಿ. ನೀವು ಎಂತಹ ವ್ಯಕ್ತಿ ಎಂದು ನಿಮಗೆ ತಿಳಿಯುವುದು ಇಲ್ಲೆ.
  • ಹೃದಯಕ್ಕೂ ಒಳ್ಳೆಯದು: ನಿಮ್ಮ ಹೃದಯದ ಬಡಿತದ ಮೇಲೆ ಪೂಜೆ ಮಾಡುವುದು ಪರಿಣಾಮ ಬೀರುತ್ತದೆ. ಮಾನಸಿಕವಾಗಿ ಇದು ನಿಮ್ಮನ್ನು ಗಟ್ಟಿ ಮಾಡಿದರೂ, ನಿಮ್ಮ ಹೃದಯಕ್ಕೆ ಇದರಿಂದ ಲಾಭವಿದೆ. ದಿನ ಈ ರೀತಿ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಕಡಿಮೆ.
  • ದೀರ್ಘಕಾಲ ಬದುಕಬಹುದು: ಈಗ ನಮ್ಮ ದೇಹ ಎಷ್ಟೆಲ್ಲಾ ವಿಷಕಾರಿ ಅಂಶಗಳಿಗೆ ಒಡ್ಡಿದ್ದೇವೆ. ಇನ್ನು ಮಾನಸಿಕವಾಗಿಯೂ ಕುಗ್ಗಿದ್ದೇವೆ. ದೇವರ ಪೂಜೆ,ಧ್ಯಾನ ಮಾಡುವವರು, ಮಾಡದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎನ್ನಲಾಗಿದೆ.
  • ಕೆಟ್ಟ ಕೆಲಸ ಮಾಡುವ ಮುನ್ನ ಆಲೋಚನೆ: ಪ್ರತಿದಿನ ಪೂಜೆ ಮಾಡುವವರು ದೇವರ ಜೊತೆ ತಮ್ಮನ್ನು ತಾವು ಕನೆಕ್ಟ್ ಮಾಡಿಕೊಳ್ಳುತ್ತಾರೆ. ಇಂಥವರಿಗೆ ಸಣ್ಣ ಪುಟ್ಟ ಕೆಲಸ ಮಾಡುವಾಗಲೂ ದೇವರು ನಮ್ಮನ್ನು ನೋಡುತ್ತಾನೆ ಎಂಬ ಅರಿವಿರುತ್ತದೆ. ಹಾಗಾಗಿ ಕೆಟ್ಟ ಆಲೋಚನೆ ಮಾಡುವುದಿಲ್ಲ.
  • ಕ್ಷಮಿಸುವುದನ್ನು ಕಲಿಯುತ್ತೀರಿ: ನಾವು ಎಷ್ಟೆಲ್ಲಾ ತಪ್ಪು ಮಾಡುತ್ತೇವೆ. ದೇವರು ನಮ್ಮನ್ನು ಕ್ಷಮಿಸುತ್ತಾನೆ. ಸಣ್ಣ ತಪ್ಪಿಗೂ ಶಿಕ್ಷೆ ಸಿಗುವಂತಿದ್ದರೆ ಭೂಮಿ ಮೇಲೆ ಯಾರೂ ಇರುತ್ತಿರಲಿಲ್ಲ. ನಾವು ಮಾಡುವ ತಪ್ಪುಗಳನ್ನು ಭಗವಂತನೇ ಕ್ಷಮಿಸುವಾಗ ನಾವು ಮಾನವರು. ಒಬ್ಬರನ್ನೊಬ್ಬರು ಕ್ಷಮಿಸಿ ಪ್ರೀತಿಯಿಂದ ಇರಲು ಆಗುವುದಿಲ್ಲವಾ?
  • ನಂಬಿಕೆ ಹೆಚ್ಚು: ಸಕಾರಾತ್ಮಕ ದಿನವನ್ನು ನಂಬುವವರು, ಏನಾದರೂ ಒಂದು ನಂಬಿಕೆಗೆ ಬದ್ಧರಾಗಿರುತ್ತಾರೆ. ಎಲ್ಲವನ್ನು ತುಂಬು ಮನಸ್ಸಿನಿಂದ ನಂಬುತ್ತಾರೆ. ಈ ರೀತಿ ನಂಬಿಕೆ ಅವರಿಗೆ ಜೀವನ ಪ್ರೀತಿ ಹುಟ್ಟಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss