Monday, August 15, 2022

Latest Posts

ಪೂರಕ ಪರೀಕ್ಷೆಯಲ್ಲಿ ಭಾಗಹಿಸುವ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಸ್ತಾಂತರ

ತುಮಕೂರು:ಹತ್ತನೆಯ ತರಗತಿಯ ಪೂರಕ ಪರೀಕ್ಷೆಯಲ್ಲಿ ಭಾಗಹಿಸುವ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ,ಕುಡಿಯುವ ನೀರಿನ ಬಾಟಲ್ ಗಳನ್ನು ರಾಮಕೃಷ್ಣ  ಆಶ್ರಮ ಮತ್ತು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ತಾಲೂಕು ಬಿ.ಇ.ಓ.ಸಿದ್ಧಗಂಗಯ್ಯ ಅವರ ವಶಕ್ಕೆ ಸ್ವಾಮಿ ಜಪಾನಂದರು ಇಂದು ಹಸ್ತಾಂತರಮಾಡಿದರು.
ಇಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ಪಾವಗಡದ ಸರ್ಕಾರಿ ಪರೀಕ್ಷಾ ಕೇಂದ್ರವಾದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರತಿ ಪರೀಕ್ಷೆಗಳಿಗೆ ವಿತರಿಸುತ್ತಿರುವಂತೆ ಮಾಸ್ಕ್, ಸ್ಯಾನಿಟೈಸರ್, ಕುಡಿಯುವ ನೀರು ಇತ್ಯಾದಿಗಳನ್ನು ತಾಲ್ಲೂಕು ವಿದ್ಯಾಧಿಕಾರಿಗಳಾಗಿರುವ ಸಿದ್ದಗಂಗಯ್ಯ ಹಾಗೂ ಮುಖ್ಯೋಪಾಧ್ಯಾಯರಾದ ಧನಂಜಯ ರವರಿಗೆ ಹಸ್ತಾಂತರಿಸಲಾಯಿತು. ಈ ಪೂರಕ ಪರೀಕ್ಷೆಯ ಪೂರ್ವದಲ್ಲಿ ಸ್ವಾಮೀ
ಜಿಯವರಿಗೆ ಒಂದು ಮನವಿ ಪತ್ರವನ್ನು ಶಾಲಾ ಆಡಳಿತ ಮಂಡಲಿ ಮತ್ತು ಮುಖ್ಯೋಪಾಧ್ಯಾಯರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ಮನವಿಗೆ ಸ್ಪಂದಿಸಿ ಮುಂದಿನ ಭಾರತದ ನಿರ್ಮಾತೃಗಳಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಕುಡಿಯುವ ನೀರು ಒಳಗೊಂಡ ಎಲ್ಲ ಪರಿಕರಗಳನ್ನು ಪರೀಕ್ಷಾ ದಿನಗಳಲ್ಲಿ ಉಪಯೋಗಿಸಿಕೊಳ್ಳುವಂತೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಅಧ್ಯಾಪಕ ವರ್ಗದವರು, ತಾಲ್ಲೂಕು ದೈಹಿಕ ಶಿಕ್ಷಕರಾದ ಬಸವರಾಜು ರವರೂ ಸಹ ಹಾಜರಿದ್ದು ಎಲ್ಲ ಪರಿಕರಗಳನ್ನು ಸ್ವೀಕರಿಸಿದರು. ಪರೀಕ್ಷೆಗೆ ಬಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ತತ್‍ಕ್ಷಣ ಮುಖಗವಸುಗಳನ್ನು ವಿತರಿಸಲಾಯಿತು. ಪಾವಗಡ ತಾಲ್ಲೂಕಿನಲ್ಲಿ ನಡೆದ ಎಲ್ಲ ವಾರ್ಷಿಕ ಹಾಗೂ ಪೂರಕ ಪರೀಕ್ಷೆಗಳಿಗೆ ಹಾಜರಾಗಿದ್ದ ಸಾವಿರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದ ಸಹಕಾರದೊಂದಿಗೆ ನೀಡಿದ್ದನ್ನು ಮತ್ತು ಇದೇ ವೇಳೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 32 ಕೊಠಡಿಗಳನ್ನು ಪರೀಕ್ಷೆಯ ಮುನ್ನ ಔಷಧಿ ಸಿಂಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಅಹರ್ನಿಷಿ ಸೇವಾ ಕಾರ್ಯ ನಿರಂತರವಾಗಿ ಅದರಲ್ಲಿಯೂ ಮುಖ್ಯವಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಹಕಾರವಾಗುವಂತಹ ಸಮಯೋಚಿತ ಸಹಾಯಹಸ್ತವನ್ನು ನೀಡುತ್ತಿರುವುದು ನಿಜಕ್ಕೂ ತಾಲ್ಲೂಕಿನ ಜನತೆಗೆ ಸಂತೋಷಕರವಾದ ವಿಚಾರವೇ ಸರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss