Monday, August 15, 2022

Latest Posts

ಪೂರಿಗೆ ಜೊತೆಯಾಗಲಿದೆ ‘ಬಾಂಬೆ ಚಟ್ನಿ’| ಈ ರೆಸಿಪಿ ಎಷ್ಟು ಸುಲಭ ಗೊತ್ತಾ?

ಮನೆಯಲ್ಲಿ ಏನು ತರಕಾರಿ ಇಲ್ಲದಿರುವಾಗ ಚಪಾತಿ, ಪೂರಿಗಳ ಜೊತೆಗೆ ಚಟ್ನಿ ಬದಲಿದೆ ನೀವು ಮಾಡಬಹುದು ಬಾಂಬೆ ಚಟ್ನಿ. ನಿಮಗಾಗಿ ನೀಡಲಿದ್ದೇವೆ ಸಿಂಪಲ್ ರೆಸಿಪಿ..

ಬೇಕಾಗುವ ಪದಾರ್ಥಗಳು:

ಕಡಲೆ ಹಿಟ್ಟು
ಉದ್ದಿನಬೇಳೆ
ಕಡಲೇ ಬೇಳೆ
ಸಾಸಿವೆ
ಜೀರಿಗೆ
ಹಸಿಮೆಣಸು
ಈರುಳ್ಳಿ(ಜೊತೆಗೆ ನಿಮ್ಮಿಷ್ಟದ ತರಕಾರಿ ಬೇಕಾದರು ಬಳಸಬಹುದು)
ಎಣ್ಣೆ
ನೀರು

ಮಾಡುವ ವಿಧಾನ:
ಒಂದು ಸಣ್ಣ ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ಹಾಕಿ ಅದಕ್ಕೆ ನೀರನ್ನು ಬೆರಸಿ ದೋಸೆ ಹಿಟ್ಟಿಗಿಂತ ತೆಳುವಾಗಿ ಮಾಡಿಕೊಂಡು ಪಕ್ಕದಲ್ಲಿಡಿ.

ನಂತರ ಒಂದು ಬಾಣಲಿಯಲ್ಲಿ 1 ಚಮಚ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಈರುಳ್ಳಿ, ಉದ್ದಕ್ಕೆ ಹೆಚ್ಚಿರುವ ಒಂದೆರಡು ಹಸಿಮೆಣಸಿನ ಕಾಯಿ(ಅಗತ್ಯಕ್ಕೆ ತಕ್ಕಂತೆ), ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ

ಈರುಳ್ಳಿ ಬೆಂದ ನಂತರ ಅದಕ್ಕೆ ತಯಾರಿಸಿದ ಕಡಲೆ ಹಿಟ್ಟಿನ ನೀರನ್ನು ಹಾಕಿ ಗಟ್ಟಿ ಹದಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿದರೆ ತಯಾರಾಗಲಿದೆ ಸಿಂಪಲ್ ಬಾಂಬೆ ಚಟ್ನಿ.

ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ‘ಬಾಂಬೆ ಚಟ್ನಿ’ ಸವಿಯಲು ಸಿದ್ಧ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss