spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೂರ್ವ ಲಡಾಖ್ ಗೆ ಭೇಟಿ ನೀಡಿ, ಯೋಧರನ್ನು ಶ್ಲಾಘಿಸಿದ ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ

- Advertisement -Nitte

ಲಡಾಖ್: ಚೀನಾ ಹಾಗೂ ಭಾರತ ನಡುವೆ ಪೂರ್ವ ಲಡಾಖ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಮಾಹಿತಿ ಪಡೆಯಲು ಭಾರತೀಯ ಸೇನಾ ಮುಖ್ಯಸ್ಥ ಜ. ಎಂ.ಎಂ. ನಾರವಣೆ ಪೂರ್ವ ಲಡಾಖ್ ಗೆ ಭೇಟಿ ನೀಡಿ, ಯೋಧರ ಜೊತೆ ಸಂವಾದ ನಡೆಸಿದ್ದಾರೆ.

ಭಾರತ-ಚೀನಾ ನಡುವಿನ ಸಂಘರ್ಷದ ಕುರಿತು ಪರಿಸ್ಥಿತಿ ತಿಳಿದುಕೊಳ್ಳಲು ನರವಣೆ ಅವರು ಪೂರ್ವ ಲಡಾಖ್ ಗೆ ಭೇಟಿ ನೀಡಿದರು. ಮಂಗಳವಾರ ಲೇಹ್ ಗೆ ಭೇಟಿ ನೀಡಿದ ಅವರು ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಜೊತೆ ಚರ್ಚೆ ನಡೆಸಿದರು. ಜೂನ್ 15ರಂದು ಘರ್ಷಣೆಯಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.

ಚೀನಾ ವಿರುದ್ಧದ ಈ ಕಠಿಣ ಪರಿಸ್ಥಿತಿಯಲ್ಲಿ ಯೋಧರ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈವರೆಗೂ ಚೀನಾ ವಿರುದ್ಧ ಸಂಘರ್ಷದಲ್ಲಿ 43 ಚೀನಾ ಯೋಧರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss