Thursday, August 18, 2022

Latest Posts

ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ನಟಿಸುವುದು ಅದಿತಿ ಪ್ರಭುದೇವ ಡೌಟ್

ಸತೀಶ್  ನೀನಾಸಂ  ಮತ್ತು  ನೀರ್ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ಆರಂಭದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಇತ್ತೀಚಿಗಷ್ಟೆ ನಟಿ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ, ಅದಿತಿ ಈ ಚಿತ್ರದಲ್ಲಿ ನಟಿಸುವುದು ಅನುಮಾನ ಎಂಬ ಸುದ್ದಿ ಹೊರಬಿದ್ದಿದೆ. ಅದಿತಿ ಅವರ ಸತತ ಸಿನಿಮಾಗಳಲ್ಲಿ ನಟಿಸುತ್ತಿರುವ ಕಾರಣ ಈ ಚಿತ್ರಕ್ಕೆ ಡೇಟ್ಸ್ ಸಮಸ್ಯೆಯಾಗಲಿದೆ. ಹೀಗಾಗಿ, ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಅದಿತಿ ಪ್ರಭುದೇವ ಮಾಡಲಿದ್ದಾರೆ ಎನ್ನಲಾಗಿದ್ದ ಪಾತ್ರಕ್ಕೆ ಈಗ ಹೊಸ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ. ಸತೀಶ್ ಜೊತೆ ಯಾರು ಹೀರೋಯಿನ್ ಆಗಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಹ ಅಷ್ಟೇ ಹೆಚ್ಚಾಗಿದೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!