Wednesday, August 10, 2022

Latest Posts

ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹ 84.45, ಡೀಸೆಲ್‌ ದರ ₹ 74.63!

ಹೊಸದಿಗಂತ ಆನ್ ಲೈನ್ ಡೆಸ್ಕ್ :

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ದಿನಗಳ ಬಳಿಕ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ನವದೆಹಲಿಯಲ್ಲಿ ಬುಧವಾರ ಪೆಟ್ರೋಲ್‌ ದರ ಪ್ರತಿ ಲೀಟರಿಗೆ ₹ 84.45, ಡೀಸೆಲ್‌ ದರ ₹ 74.63 ದಾಖಲಾಗಿದೆ.
ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರದಲ್ಲಿ 26 ಪೈಸೆ ಹಾಗೂ ಡೀಸೆಲ್‌ ದರದಲ್ಲಿ 27 ಪೈಸೆ ಹೆಚ್ಚಳವಾಗಿದ್ದು ಪೆಟ್ರೋಲ್‌ ಗೆ ₹ 87.30 ಹಾಗೂ ಡೀಸೆಲ್‌ ಗೆ ₹ 79.14 ದಾಖಲಾಗಿದೆ. ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಡರ್‌ಮಿಡಿಯಟ್‌ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ ಶೇ 1.3ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರಲ್‌ಗೆ 53.88 ಡಾಲರ್‌ಗಳಿಗೆ ಹಾಗೂ ಬ್ರೆಂಟ್ ತೈಲ ದರ 79 ಸೆಂ‌ಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 57.37 ಡಾಲರ್‌ಗೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss