Monday, July 4, 2022

Latest Posts

ಪೆಟ್ರೋಲ್- ಡೀಸಲ್ ದರ ಮತ್ತೆ ಏರಿಕೆ: ರಾಜಧಾನಿ ಬೆಂಗಳೂರಿನಲ್ಲಿ ದರ ಎಷ್ಟಿದೆ ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಒಂದು ವಾರದಿಂದ ದೇಶದಲ್ಲಿ ತೈಲ ದರದಲ್ಲಿ ಏರಿಕೆ ಕಂಡು ಬರುತ್ತಲ್ಲೇ ಇದ್ದು, ಇಂದು ಕೂಡ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಜನತೆಗೆ ಶಾಕ್ ನೀಡಿದೆ.

ಪೆಟ್ರೋಲ್ ದರದಲ್ಲಿ 19 ಪೈಸೆ ಹಾಗೂ ಡೀಸಲ್ ನಲ್ಲಿ 26 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಲೀಟರ್ ಪೆಟ್ರೋಲ್ ಗೆ 81.89 ರೂ ಆಗಿದ್ದು, ಡೀಸಲ್ ದರ 71.86 ರೂ ಆಗಿದೆ.

ಮುಂಬೈ ನಲ್ಲಿ ಪೆಟ್ರೋಲ್ ದರ 88.58 ರೂ ಆಗಿದೆ. ಡೀಸಲ್ ಗೆ 78.38 ಆಗಿದೆ. ಚೆನ್ನೈ ನಲ್ಲಿ 84.91 ರೂ ಲೀಟರ್ ಪೆಟ್ರೋಲ್, ಕೊಲ್ಕತ್ತಾ ದಲ್ಲಿ 83.44 ರೂ. ಆಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಗೆ 84.64 ರೂ ಆಗಿದೆ. ಡೀಸಲ್ ದರ ಲೀಟರ್ ಗೆ 76.18 ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss