Friday, August 12, 2022

Latest Posts

ಪೆಟ್ರೋಲ್ ಬಳಕೆದಾರರಿಗೆ ಶಾಕ್ : 13 ದಿನಗಳಲ್ಲಿ 11 ಬಾರಿ ಪೆಟ್ರೋಲ್ ಬೆಲೆ ಏರಿಕೆ

ನವದೆಹಲಿ: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಇಂಧನ ಬೆಲೆ ಸತತವಾಗಿ ಏರುತ್ತಲೇ ಇತ್ತು. ಈಗ ಮತ್ತೆ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಏರಿಸುತ್ತಿದ್ದು, ಕಳೆದ ೧೩ ದಿನಗಳಲ್ಲಿ ೧೧ ಸಲ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

ಆಗಸ್ಟ್ ೧೬ ರಿಂದ ಪೆಟ್ರೋಲ್ ಬೆಲೆ ಏರಿಕೆ ಪ್ರಾರಂಭವಾಗಿತ್ತು. ಆ.೧೬ರಂದು ಪ್ರತಿ ಲೀ.ಗೆ ೧೪ ಪೈಸೆ, ಆ.೧೭ ರಂದು ೧೬ ಪೈಸೆ, ಆ.೧೮ ರಂದು ೧೭ ಪೈಸೆ, ಆ.೨೦ ರಂದು ೧೦ ಪೈಸೆ, ೨೧ ರಂದು ೧೯ ಪೈಸೆ, ಆಗಸ್ಟ್ ೨೨ ರಂದು ೧೬ ಪೈಸೆ, ಆ. ೨೩ ರಂದು ೧೪ ಪೈಸೆ, ಆ.೨೪ ರಂದು ೧೩ ಪೈಸೆ, ಆ.೨೫ ರಂದು ೧೧ ಪೈಸೆ, ಆ.೨೭ರಂದು ೧೦ ಪೈಸೆ ಏರಿಕೆಯಾಗಿದು, ಇಂದೂ ಕೂಡ ೧೧ ಪೈಸೆ ಏರಿಕೆಯಾಗಿದೆ.

ಆಗಸ್ಟ್‌ನಲ್ಲಿ ಇವತ್ತಿನವರೆಗೆ ಒಟ್ಟಾಗಿ ೧೩ ದಿನಗಳಲ್ಲಿ ೧೧ ದಿನ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಒಟ್ಟಿನಲ್ಲಿ ಲೀ.ಗೆ ೧.೫೧ ಪೈಸೆ ಏರಿಕೆಯಾದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss