ಹೊಸ ದಿಗಂತ ವರದಿ, ರಾಮನಗರ:
ತನ್ನ ವ್ಯಾಪಾರ ಲಾಭದ ಉದ್ದೇಶವಾಗಿ ಪ್ರತಿಸ್ಪರ್ಧಿ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಹಾರೋಹಳ್ಳಿ ಪೋಲೀಸರು ಸಫಲರಾಗಿದ್ದಾರೆ. ತಾಲೂಕಿನ ಹಾರೋಹಳ್ಳಿಯ ಕೃಷ್ಣ ಆಟೋ ಮೊಬೈಲ್ ಅಂಗಡಿಗೆ ಡಿ.20ರಂದು ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಇದರಿಂದ ಮಾಲೀಕ ರಘುವೀರ್ ಸಿಂಗ್ ಅವರಿಗೆ ಲಕ್ಷಾoತರ ರೂ. ನಷ್ಟವಾಗಿತ್ತು. ಬೆಳಿಗ್ಗೆ ಹಾರೋಹಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಾಲೀಕ ಪೋಲೀಸರ ಬಳಿ ಅವಲತ್ತುಕೊಂಡಿದ್ದರು. ಅದರಂತೆ ದೂರು ದಾಖಲಿಸಿಕೊಂಡ ಹಾರೋಹಳ್ಳಿ ಪೋಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಏನಿದು ಪ್ರಕರಣ?:
ರಘು ವೀರ್ ಸಿಂಗ ಅವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಿದ ಪೋಲೀಸರು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದ ಮಹದೇವ ಆಟೋಮೊಬೈಲ್ ಅಂಗಡಿಯ ಮಾಲೀಕ ಮುಖೇಶ್ ಕುಮಾರ್ ಅನ್ನು ಠಾಣೆಗೆ ಕರೆತಂದು ಸುದೀರ್ಘವಾಗಿ ವಿಚಾರಣೆ ಗೊಳಪಡಿಸಿದಾಗ ಪೋಲೀಸರ ಮುಂದೆ ಆರೋಪಿ ಮುಖೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಒಂದು ವರ್ಷದ ಹಿಂದೆ ತಮ್ಮ ಅಂಗಡಿಯ ಸಮೀಪದಲ್ಲಿ ರಘುವೀರ್ ಸಿಂಗ್ ಅವರು ಕೃಷ್ಣ ಆಟೋಮೊಬೈಲ್ ಅಂಗಡಿಯನ್ನು ತೆರೆದಿದ್ದು ಇದರಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದು ಇದರಿಂದ ಕುಪಿತಗೊಂಡು ಈ ಹಿಂದೆ ನನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಝಾಕೀರ್ನೊಂದಿಗೆ ಒಳ ಸಂಚು ರೂಪಿಸಿ ಝಾಕೀರ್ ಸ್ನೇಹಿತ ಬಲವೀರ್ ಸಿಂಗ್ ಹಾಗೂ ಅವನ ಸಹಚರರನ್ನು ರಾಜಸ್ಥಾನದಿಂದ ಇಲ್ಲಿಗೆ ಕರೆಸಿ ಕೃತ್ಯವನ್ನು ಎಸಗಿರುವುದಾಗಿ ಆರೋಪಿ ಮುಖೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೊಂದು ಪ್ರಕರಣ ಪತ್ತೆ; ವಿಚಾರಣೆ ವೇಳೆ ಹಾರೋಹಳ್ಳಿ ಪೋಲೀಸ್ ಠಾಣೆಯ ಇನ್ನೊಂದು ಪ್ರಕರಣ ಪತ್ತೆಯಾಗಿದ್ದು ಸುಮಾರು ಒಂದು ವರ್ಷದ ಹಿಂದೆ ಹಾರೋಹಳ್ಳಿಯ ಕುಂಬಾರ್ ಷೆಡ್ನಲ್ಲಿದ್ದ ಮಹಾಲಕ್ಷಿö್ಮ ಆಟೋಮೊಬೈಲ್ ಅಂಗಡಿಗೂ ಕೂಡ ಇದೇ ರೀತಿ ಸಂಚು ರೂಪಿಸಿ ಬೆಂಕಿ ಹಚ್ಚಿದ್ದು ನಾವೇ ಎಂದು ಆರೋಪಿ ಮುಖೇಶ್ ಕುಮಾರ್ ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಮೇಲ್ಕಂಡ ೨ಪ್ರಕರಣಗಳಿಗೆ ಸಂಬAಧಿಸಿದAತೆ ಸುಮಾರು ೪೩,೫೦,೦೦೦ರೂ ಮೌಲ್ಯದ ಆಟೋಮೊಬೈಲ್ಗೆ ಸಂಬAಧಿಸಿದ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ಸುಟ್ಟು ಹಾಕಿದ್ದು ಪೋಲೀಸರು ಆರೋಪಿ ಮುಖೇಶ್ ಕುಮಾರ್(೨೫)ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಉಳಿದ ಆರೋಪಿಗಳ ಪತ್ತೆಗೆ ಜಾಲಬೀಸಲಾಗಿದೆ. ತನಿಖೆಯಲ್ಲಿ ಎಸ್ಪಿ ಗಿರೀಶ್ ಮಾರ್ಗ ದರ್ಶನದಂತೆ ಉಪಾಧೀಕ್ಷಕರಾದ ಪುರುಷೋತ್ತಮ್ ಅವರ ನೇತೃತ್ವದಲ್ಲಿ ಹಾರೋಹಳ್ಳಿ ವೃತ್ತ ನಿರೀಕ್ಷಕ ಸತೀಶ್, ಪಿಎಸ್ಐ ಮುರಳಿ ಸಿಬ್ಬಂಧಿಗಳಾದ ಬೋರೇಗೌಡ, ವಿಶ್ವನಾಥ್, ಕೊಪ್ಪಸಿದ್ದಯ್ಯ, ಶಿವಕುಮಾರ್,ರಾಜು, ಶ್ರೀನಿವಾಸ್, ಕೃಷ್ಣಮೂರ್ತಿ, ಹಾಗೂ ಜೀಪ್ ಚಾಲಕ ಶ್ರೀಕಾಂತ್ ಪಾಲ್ಗೊಂಡಿದ್ದರು.