Sunday, April 11, 2021

Latest Posts

ಪೆಟ್ರೋಲ್ ಸುರಿದು ಚಾಲಕನ ಕೊಲೆಯತ್ನ: ಆರೋಪಿಯ ಬಂಧಿಸಿದ ಪೊಲೀಸರು

ಹೊಸ ದಿಗಂತ ವರದಿ, ಮಂಗಳೂರು:

ನಗರದ ಹೊರವಲಯದ ಪೈಸಲ್ ನಗರದ ಬಳಿ ಜ.19ರಂದು ರಾತ್ರಿ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಹತ್ಯೆಗೆ
ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ಪ್ರಕರಣದ ಮಾಹಿತಿ ನಿಡಿದ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಆರೋಪಿ ಫೈಸಲ್‌ನಗರದ ನಿವಾಸಿಯಾಗಿದ್ದು,ಮುಹಮ್ಮದ್ ಅಶ್ರಫ್ (26) ಎಂದು ಗುರುತಿಸಲಾಗಿದೆ. ಬಸ್ ಚಾಲಕನ ಮೇಲಿನ ದ್ವೇಷದಿಂದ ಈ ಕೃತ್ಯ ಎಸಗಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಬಸ್ ಚಾಲಕ ಸಂಪತ್ ಪೂಜಾರಿ ಫೈಸಲ್ ನಗರದಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದಾಗ ಈ ಬಸ್‌ನ ಹಿಂದೆ ಬೈಕನಲ್ಲಿ ಅಶ್ರಫ್ ಸಾಗುತ್ತಿದ್ದ. ಬಸ್ ಚಾಲಕ ತನಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಅದೇ ದಿನ ರಾತ್ರಿ ಬಸ್ ಮತ್ತು ಸಂಪತ್ ಪೂಜಾರಿ ಮೇಲೆ ಪೆಟ್ರೋಲ್ ಎರಚಿದ್ದ ಎಂದು ಆಯುಕ್ತರು ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss