ಹೊಸದಿಗಂತ ಆನ್ಲೈನ್ ಡೆಸ್ಕ್:
ಕಾಸರಗೋಡು ಪೆರ್ಲ ಪರಿಸರದಿಂದ ಯುವಕನೋರ್ವನನ್ನು ಅಪಹರಣ ನಡೆಸಿದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಅಪಹೃತ ಯುವಕನನ್ನು ದುಷ್ಕರ್ಮಿಗಳು ನೆಲ್ಲಿಕಟ್ಟೆ ಸಮೀಪದ ಚರ್ಲಡ್ಕ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೆರ್ಲ ಚೆಕ್ ಪೋಸ್ಟ್ ಸಮೀಪದ ನಿವಾಸಿಯಾಗಿರುವ ಅಬ್ಬಾಸ್ (25) ಎಂಬ ಯುವಕನನ್ನು ಭಾನುವಾರ ತಂಡವೊಂದು ಕಾರಿನಲ್ಲಿ ಬಂದು ಅಪಹರಿಸಿತ್ತು. ಈ ಘಟನೆಯಿಂದ ಆತಂಕಗೊಂಡ ಯುವಕನ ಮನೆಯವರು ತಕ್ಷಣವೇ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಅಪಹರಣಕಾರರು ಅಬ್ಬಾಸ್ನನ್ನು ತೊರೆದು ಪರಾರಿಯಾಗಿದ್ದಾರೆ.