Saturday, August 13, 2022

Latest Posts

ಪೆರ್ಲ ನಾಲಂದ ಕಾಲೇಜಿನಲ್ಲಿ ಅ.5ರಿಂದ 10ರವರೆಗೆ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಕಾಸರಗೋಡು: ಸಹಕಾರ ಭಾರತಿ ಕಾಸರಗೋಡು, ಕ್ಯಾಂಪ್ಕೋ ಲಿ. ಮಂಗಳೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು, ನಾಲಂದ ಕಾಲೇಜು ಪೆರ್ಲ ಹಾಗೂ ಗ್ರಾಮ ವಿಕಾಸ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ಅಕ್ಟೋಬರ್ 5 ರಿಂದ 10ರ ವರೆಗೆ ಪೆರ್ಲ ನಾಲಂದ ಕಾಲೇಜಿನಲ್ಲಿ ವಿವಿಧ ವಿಷಯಗಳಲ್ಲಿ ನೈಪುಣ್ಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ನಡೆಯಲಿರುವ ಈ ತರಬೇತಿಯ ಪ್ರತಿಯೊಂದು ವಿಷಯಕ್ಕೆ ಮೊದಲು ನೋಂದಣಿ ಮಾಡುವ 25 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಶಿಬಿರವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ನಡೆಯಲಿದೆ. ನೋಂದಣಿ ಶುಲ್ಕ 250 ರೂಪಾಯಿಯನ್ನು ಶಿಬಿರದ ಆರಂಭದ ದಿನ ಪಾವತಿಸಬೇಕು ಎಂದು ತಿಳಿಸಲಾಗಿದೆ.
ತರಬೇತಿ ಪೂರ್ತಿಗೊಳಿಸಿದವರಿಗೆ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಮಾಣ ಪತ್ರ ನೀಡಲಾಗುವುದು. ಆಯಾಯ ತರಬೇತಿಯ ವಿಷಯದ ಜೊತೆಗೆ ಕೊಡಲಾದ ಫೋನ್ ನಂಬರ್ ಗೆ ಕರೆಮಾಡಿ ಹೆಸರು ನೊಂದಾಯಿಸಬಹುದು.
1) ಹೈನುಗಾರಿಕೆ: ಶಶಿಭೂಷಣ ಶಾಸ್ತ್ರಿ – 9447394969, 2) ಜೇನು ಸಾಕಣೆ ಮತ್ತು ಮೀನು ಸಾಕಣೆ: ಪದ್ಮರಾಜ ಪಟ್ಟಾಜೆ – 9447855962, 3) ಪ್ಲಂಬಿಂಗ್ ಮತ್ತು ಇಲೆಕ್ಟ್ರಿಶಿಯನ್: ಶ್ರೀಧರ ಭಟ್ – 9074167987, 4) ಮನೆಯ ವಿದ್ಯುತ್ ಉಪಕರಣಗಳ ರಿಪೇರಿ: ಗಣೇಶ್ ಪಾರೆಕಟ್ಟೆ – 9447317422, 5) ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್: ವಿನೋದ್ ಬಾಯಾರು – 9400844993, 6) ಆಹಾರ ಸಂಸ್ಕರಣೆ: ಸದಾಶಿವ ಕಡಂಬಾರು – 9567104360, 7) ಫ್ಯಾಷನ್ ವಿನ್ಯಾಸ: ಸವಿತಾ ಬಾಳಿಕೆ – 9495295115, 8) ಕೃಷಿಯಂತ್ರ ಬಳಕೆ ಮತ್ತು ದುರಸ್ತಿ: ಎನ್.ಗಣೇಶ್ ಪೆರ್ಲ : 9497728252, 9) ಕಸಿ ಕಟ್ಟುವಿಕೆ ಮತ್ತು ಟೆರೇಸ್ ಕೃಷಿ ಹಾಗೂ ಮಲ್ಲಿಗೆ ಕೃಷಿ: ಶ್ರೀನಿಧಿ ಪೆರ್ಲ – 8086831333, 10) ಮೊಬೈಲ್ ದುರಸ್ತಿ: ದಿನೇಶ್ ಆರಿಕ್ಕಾಡಿ – 8075833998 ಮತ್ತು 9447449824, 11) ಹೋಂ ನರ್ಸಿಂಗ್: ರಾಜಶೇಖರ ಪೆರ್ಲ – 9447917746 ಎಂಬಿತ್ಯಾದಿ ವಿಷಯಗಳಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಅಶೋಕ್ ಬಾಡೂರು: 9497449055, ಸತೀಶ್ ಶೆಟ್ಟಿ ಒಡ್ಡಂಬೆಟ್ಟು 9746368989, ಕೇಶವ ಶರ್ಮ ಪೆರ್ಲ: 8921415233 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss