Wednesday, August 17, 2022

Latest Posts

ಪೇಜಾವರ ಶ್ರೀವಿಶ್ವೇಶತೀರ್ಥರ ಪೂರ್ವಾಶ್ರಮದ ಸಹೋದರಿ ನಿಧನ

ಉಡುಪಿ: ಇಲ್ಲಿನ ಕನ್ನರ್ಪಾಡಿ ನಿವಾಸಿ ವಸಂತೀದೇವಿ ಅಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು.
ಪೇಜಾವರ ಮಠಾಧೀಶರಾಗಿದ್ದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರಿಯಾಗಿದ್ದ ವಸಂತೀದೇವಿ ಅವರು ಧರ್ಮಾನುಷ್ಠಾನ ನಿಷ್ಠೆಯ ಸಾತ್ವಿಕ ಗೃಹಿಣಿಯಾಗಿದ್ದರು.

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜದ ಹಳೇ ನೇರಂಕಿ ಗ್ರಾಮದ ಎರಟಾಡಿಯಲ್ಲಿರುವ ಪೂರ್ವಾಶ್ರಮದ ಮನೆಯಲ್ಲಿ ಪೇಜಾವರ ಶ್ರೀಗಳು, ವಸಂತೀದೇವಿ ಸಹಿತ ಸಹೋದರ, ಸಹೋದರಿಯರು ಜೊತೆಯಾಗಿ ಬಾಲ್ಯವನ್ನು ಕಳೆದಿದ್ದರು. ನಂತರ ಕುಟುಂಬ ಉಡುಪಿಗೆ ಸ್ಥಳಾಂತರಗೊಂಡಿತ್ತು.

ಮೃತರು ಸಹೋದರ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!