spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೇಜಾವರ ಶ್ರೀ ಗಳ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ವಿಹಿಂಪ ಮುಖಂಡ ಗೋಪಾಲ್ ನಾಗರಕಟ್ಟೆ

- Advertisement -Nitte

ಉಡುಪಿ: ನೀಲಾವರದ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತ ನಿರತರಾಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ವಿಶ್ವ ಹಿಂದು ಪರಿಷತ್ ರಾಜಸ್ಥಾನ ಹಾಗೂ ಗುಜರಾತ್ ಕ್ಷೇತ್ರಗಳ ಸಂಘಟನಾ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಅವರು ಭೇಟಿಯಾಗಿ, ಕುಶಲೋಪರಿ ವಿಚಾರಿಸಿದ್ದಾರೆ.
ಈ ವೇಳೆ ಉಭಯರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಗತ್ತನ್ನು ಸಂಕಷ್ಟಕ್ಕೆ ಸಿಲಿಕಿಸಿರುವ ಕೊರೋನಾ, ವಿಶ್ವ ಹಿಂದು ಪರಿಷತ್, ಗೋಶಾಲೆಗಳ ನಿರ್ವಹಣೆ, ಬೆಂಗಳೂರು ಘಟನೆ ಮೊದಲಾದವುಗಳ ಬಗ್ಗೆ ದೀರ್ಘ ಕಾಲ ಚರ್ಚೆ ನಡೆಸಿದರು.
’ಹೊಸ ದಿಗಂತ’ದೊಂದಿಗೆ ಮಾತನಾಡಿದ ಗೋಪಾಲ್ ಅವರು, ಪ್ರತೀ ಚಾತುರ್ಮಾಸ್ಯ ವ್ರತದ ಸಂದರ್ಭ ಮಠಾಧೀಶರನ್ನು ಭೇಟಿ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದು, ಅದರಂತೆ ಸೌಹಾರ್ದ ಭೇಟಿ ಮಾಡಿದ್ದೇವೆ. ಅಯೋಧ್ಯೆ ಸಹಿತ ವಿವಿಧ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರು ಘಟನೆಯ ಬಗ್ಗೆ ಪೇಜಾವರ ಶ್ರೀಗಳು ಕೂಡ ದುಃಖಿತರಾಗಿದ್ದಾರೆ. ಈ ರೀತಿಯ ಉಗ್ರವಾದ ಸರಿಯಲ್ಲ ಎಂಬುದಾಗಿ ಸ್ವಾಮೀಜಿ ಮಾತನಾಡಿದ್ದಾರೆಂದು ತಿಳಿಸಿದರು.
ನೀಲಾವರದಲ್ಲಿರುವ ಪೇಜಾವರ ಮಠದ ಗೋಶಾಲೆಗೆ ಸುತ್ತಮುತ್ತಲ ಹಳ್ಳಿಗಳಿಂದ ಯುವಕರು ಹಸಿರು ಹುಲ್ಲನ್ನು ತಂದು ಕೊಡುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಸಂತಸದಿಂದ ಹೇಳಿದರು. ಸರಕಾರ ಗೋಶಾಲೆಗಳ ನಿರ್ವಹಣೆಗೆ ನೆರವು ನೀಡಬೇಕು. ಪ್ರಸ್ತುತ ಕೋವಿಡ್‌ನಿಂದಾಗಿ ಧನ ಸಂಗ್ರಹ ಸಹಜವಾಗಿಯೇ ಕಡಿಮೆಯಾಗಿದೆ. ಇದರಿಂದ ಗೋಶಾಲೆಗಳ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಬಡವರಿಗೆ ಸಹಾಯ ಮಾಡುವಂತೆ ಮೂಕಪ್ರಾಣಿಗಳಿಗೂ ನೆರವಾಗಬೇಕೆಂಬ ಆಶಯವನ್ನು ಪೇಜಾವರ ಶ್ರೀಗಳು ವ್ಯಕ್ತಪಡಿಸಿದರು ಎಂದು ವಿಹಿಂಪ ಪ್ರಮುಖರಾದ ಗೋಪಾಲ್ ಅವರು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss