Sunday, August 14, 2022

Latest Posts

ಪೈವಳಿಕೆ ಚೇರಾಲಿನಲ್ಲಿ 7 ಸಿಪಿಎಂ ಕುಟುಂಬಗಳು ಬಿಜೆಪಿಗೆ ಅಧಿಕೃತ ಸೇರ್ಪಡೆ

ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರು ಸಮೀಪದ ಚೇರಾಲು ಎಂಬಲ್ಲಿ 7 ಸಿಪಿಎಂ ಕುಟುಂಬಗಳ ಸದಸ್ಯರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಸಿಪಿಎಂನ ಕಪಟ ಧೋರಣೆಗೆ ಬೇಸತ್ತು ಹಾಗೂ ಬಿಜೆಪಿಯ ಸಮಾಜಸ್ನೇಹಿ ತತ್ವ ಸಿದ್ಧಾಂತಗಳಿಗೆ ಸಂಪೂರ್ಣ ಬದ್ಧರಾಗಿ ಕಮಲ ಪಕ್ಷಕ್ಕೆ ಸೇರುತ್ತಿರುವುದಾಗಿ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ , ಮಂಡಲ ಕಾರ್ಯದರ್ಶಿ ಪುಷ್ಪಾಲಕ್ಷ್ಮೀ ಎನ್., ಕೃಷಿಕಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲು, ಬಿಜೆಪಿ ಪಂಚಾಯತ್ ಸಮಿತಿಯ ಉಪಾಧ್ಯಕ್ಷ ಸತ್ಯಶಂಕರ್ ಭಟ್ ಮಳಿವು ಅವರು ಎಲ್ಲ 7 ಕುಟುಂಬ ಸದಸ್ಯರನ್ನು ಶಾಲು ಹಾಕಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಈ ವೇಳೆ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ , ಕಾರ್ಯದರ್ಶಿ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss