ಮಡಿಕೇರಿ: ವೀರಾಜಪೇಟೆ ತಾಲೂಕಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ( ಕೆಪಿಟಿಸಿಎಲ್)ದ ಕಾರ್ಯವೈಖರಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಜತೆ ಜತೆಗೆ ಈ ಬಾರಿ ಚೆಸ್ಕಾಂ ಕೂಡಾ ಪೊನ್ನಂಪೇಟೆ-ಬಾಳೆಲೆ ನಡುವೆ ರೂ.180 ಲಕ್ಷ ವೆಚ್ಚದಲ್ಲಿ ಸುಮಾರು 18 ಕಿ.ಮೀ.ಉದ್ದದ 11 ಕೆ.ವಿ. ಕೇಬಲ್ ಅಳವಡಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ.
ಆಗಸ್ಟ್ ಮೊದಲ ವಾರದ ಕುಂಭದ್ರೋಣ ಮಳೆಗೆ ಬಾಳೆಲೆ-ಪೊನ್ನಪ್ಪಸಂತೆ-ನಲ್ಲೂರು-ಪೊನ್ನಂಪೇಟೆ ಮಾರ್ಗ ಸುಮಾರು 7-8 ಕಡೆಗಳಲ್ಲಿ ದುಬಾರಿ ಬೆಲೆ ಬಾಳುವ ಭಾರೀ ಗಾತ್ರದ ಕೇಬಲ್ ತುಂಡಾಗಿ ಬಿದ್ದಿದೆ. ಕೆಲಸ ನೆನೆಗುದಿಗೆ ಬಿದ್ದಿದೆ. ಪರಿಣಾಮವಾಗಿ ಬಾಳೆಲೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಆ.2ರ ಮಧ್ಯರಾತ್ರಿಯಿಂದ ಬುಧವಾರದವರೆಗೂ ಸುಮಾರು 18 ದಿನ ಕತ್ತಲೆಯ ಕರಾಳ ರಾತ್ರಿಯನ್ನು ಅನುಭವಿಸುವಂತಾಗಿದೆ.
ಬಾಳೆಲೆಯಲ್ಲಿ ವಿದ್ಯುತ್ ಉಪ ಕೇಂದ್ರದ ಹಲವು ವರ್ಷದ ಬೇಡಿಕೆ 2 ಎಕರೆ ನಿವೇಶನ ಸಮಸ್ಯೆಯಿಂದಾಗಿ ಇನ್ನೂ ಈಡೇರಿಲ್ಲ. ಪೊನ್ನಂಪೇಟೆ ಉಪ ಕೇಂದ್ರದಿಂದ 11 ಕೆ.ವಿ.ವಿದ್ಯುತ್ ಲೇನ್ ಹಳೆಯ ಸಂಪರ್ಕವಿದ್ದರೂ, ಮಳೆಗಾಲದಲ್ಲಿ ಲಕ್ಷ್ಮಣ ತೀರ್ಥ ಪ್ರವಾಹ, ಕೀರೆ ಹೊಳೆ ಪ್ರವಾಹದಿಂದಾಗಿ ವರ್ಷಂಪ್ರತಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳುವದು ಸಾಮಾನ್ಯ. ಈ ಬಾರಿಯೂ ಸುಮಾರು 250 ರಿಂದ 300 ಕಂಬಗಳು ಈ ಭಾಗದಲ್ಲಿ ಧರೆಗುರುಳಿವೆ ಎಂದು ಬಾಳೆಲೆಯ ಸೆಸ್ಕ್ ಮೂಲ ತಿಳಿಸಿದೆ.
ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಪೂರ್ವಾನುಮತಿ ದೊರೆತಿದ್ದರೂ, ಸೆಸ್ಕ್ ರೂ.180 ಲಕ್ಷದ ಕೇಬಲ್ ವಿದ್ಯುತ್ ಹೊಸ ಯೋಜನೆಯನ್ನು 2 ವರ್ಷದ ಹಿಂದೆ ತಂದಿದೆ. ಆದರೆ ಇದೀಗ ಕಳಪೆ ಕೇಬಲ್ ಅಳವಡಿಕೆಯ ಆರೋಪ ವ್ಯಕ್ತವಾಗಿದೆ. ಬಾಳೆಲೆ ಗ್ರಾಮಸ್ಥರ ಪ್ರಕಾರ ಪೊನ್ನಂಪೇಟೆ ವಿದ್ಯುತ್ ಸರಬರಾಜು ಕೇಂದ್ರದಿಂದ ಚಿಕ್ಕಮಂಡೂರು, ನಲ್ಲೂರು, ಪೊನ್ನಪ್ಪಸಂತೆ ಮಾರ್ಗ ಬಾಳೆಲೆ ಪೆÇಲೀಸ್ ಉಪಠಾಣೆ ಮುಂಭಾಗದವರೆಗೆ ಸುಮಾರು 18 ಕಿ.ಮೀ. ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದರೂ, ಕೇವಲ ಒಂದು ವಾರ ಮಾತ್ರ ವಿದ್ಯುತ್ ಪೂರೈಕೆಯಾಗಿದೆ. ಕಳಪೆ ಕೇಬಲ್ ಅಳವಡಿಕೆಯಿಂದಾಗಿ ರೂ.180 ಲಕ್ಷದ ಯೋಜನೆ ವೈಫಲ್ಯ ಕಂಡಿದೆ ಎಂದು ಪತ್ರಿಕೆಯೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.
ಉದ್ದೇಶಿತ ‘ಏರಿಯಲ್ ಬಂಚ್ಡ್ ಕೇಬಲ್’ ಅಳವಡಿಕೆ ಕಾಮಗಾರಿಯನ್ನು ಟೆಂಡರ್ ಮೂಲಕ ಮೈಸೂರಿನ ‘ಕೋರ್ ಫೆÇೀರ್ ಇಂಜಿನಿಯರ್ಸ್’ಗೆ ಗುತ್ತಿಗೆ ನೀಡಲಾಗಿದ್ದು ಇದೀಗ ಕಾಮಗಾರಿಯೂ ಮುಗಿದಿದೆ. ರೂ.180 ಲಕ್ಷವೂ ಪಾವತಿಯಾಗಿದೆ! ಇದೀಗ ಹಲವು ಕಡೆ ಕೇಬಲ್ ಮೇಲೆ, ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಬೆಲೆಬಾಳುವ ಕೇಬಲ್ ತುಂಡಾಗಿ ಬಿದ್ದಿದೆ. ಕಳೆದ 2 ವರ್ಷದ ಅವಧಿಯಲ್ಲಿ ರೂ.180 ಲಕ್ಷ ಹಣ ಪೆÇೀಲಾಗಿದೆ! ವಿದ್ಯುತ್ ಮಾತ್ರ ಪ್ರವಹಿಸಿಲ್ಲ! ಇದೊಂದು ದೊಡ್ಡ ಕೇಬಲ್ ಮಾಫಿಯಾನಾ? ಯಾರ್ಯಾರ ಕೀಸೆಗೆ ಎಷ್ಟೆಷ್ಟು ರವಾನೆಯಾಗಿದೆ? ಜವಾಬ್ದಾರಿಯುತ ಜನಪ್ರತಿನಿಧಿಗಳು ಈ ದೊಡ್ಡ ಅವ್ಯವಹಾರ, ಅವ್ಯವಸ್ಥೆಯ ಬಗ್ಗೆ ಇನ್ನೂ ಯಾಕೆ ತುಟಿ ಪಿಟಿಕ್ ಎನ್ನದೆ ಮೌನ ವಹಿಸಿದ್ದಾರೆ! ಎಂಬ ಗುಸು ಗುಸು ಬಾಳೆಲೆಯಾದ್ಯಂತ ಕೇಳಿಬರುತ್ತಿದೆ.
ಇಂತಹ ಭಾರೀ ಗಾತ್ರದ ‘ಏರಿಯಲ್ ಬಂಚ್ಡ್ ಕೇಬಲ್’ ಅಳವಡಿಸುವದೇ ಮರ ಬಿದ್ದರೂ, ಕಂಬ ಬಿದ್ದರೂ ವಿದ್ಯುತ್ ತಂತಿ ತುಂಡಾಗಬಾರದೆಂದು. ಆದರೆ, ನಲ್ಲೂರು, ಪೆÇನ್ನಪ್ಪಸಂತೆ ಮುಖ್ಯ ರಸ್ತೆಯಲ್ಲಿ ತೆರಳಿದಾಗ ಕೇಬಲ್ ಗುಣಮಟ್ಟದ ಅಸಲಿಯತ್ತು ಬಟ್ಟ ಬಯಲಾಗುತ್ತದೆ. ಇದೀಗ 18 ದಿನ ಬಾಳೆಲೆ, ದೇವನೂರು, ರಾಜಾಪುರ ಗ್ರಾಮಸ್ಥರು ಕತ್ತಲೆಯಲ್ಲಿ ಕಳೆಯಲು ಕಳಪೆ ಗುಣಮಟ್ಟದ ಕೇಬಲ್ ಅಳವಡಿಕೆಯೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ. ವಿಪರ್ಯಾಸವೆಂದರೆ ಕೇಬಲ್ ಸಂಪರ್ಕದಲ್ಲಿ ಅಡಚಣೆ ಕಾಣಿಸಿಕೊಂಡರೆ ಸೆಸ್ಕ್ ಮಾರ್ಗದಾಳುಗಳಿಗೆ ರೀಪೇರಿ ಅಸಾಧ್ಯ. ಮೈಸೂರಿನಿಂದಲೇ ಇದರ ವಿಶೇಷ ತಜ್ಞರು ಬರಬೇಕು. ಇದೀಗ ಕೇಬಲ್, ಕಂಬಗಳು ತುಂಡಾಗಿ ಬಿದ್ದು 15 ದಿನಗಳೇ ಕಳೆದರೂ ರೂ.180 ಲಕ್ಷ ಕಾಮಗಾರಿ ಪೂರೈಸಿದ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ಅಲ್ಲಿ ಕಂಡು ಬರುತ್ತಿಲ್ಲ. ಅಷ್ಟಕ್ಕೂ ಭಾರೀ ಗಾತ್ರದ ಕೇಬಲ್ಗಳನ್ನು ಎಚ್ಚರಿಕೆಯಿಂದ ಅಳವಡಿಸಬೇಕಾಗುತ್ತದೆ. 11 ಕೆ.ವಿ.ಸಾಮಥ್ರ್ಯದ ಕೇಬಲ್ ಅಳವಡಿಸುವ ಕಾಮಗಾರಿಯೂ ಅವೈಜ್ಞಾನಿಕವಾಗಿ ಆಗಿದೆ ಎಂಬುದು ಗ್ರಾಮಸ್ಥರ ಆರೋಪ.
ಈ ಕುರಿತು ಮಡಿಕೇರಿಯ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಬಿ.ಸೋಮಶೇಖರ್ ಅವರನ್ನು ಪ್ರಶ್ನಿಸಿದಾಗ, ಮಾರ್ಚ್ ತಿಂಗಳಿನಿಂದಲೇ ಉದ್ದೇಶಿತ ಕೇಬಲ್ ಮೂಲಕ ಬಾಳೆಲೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ಭಾರೀ ಮಳೆ ಗಾಳಿ ಹಿನ್ನೆಲೆಯಲ್ಲಿ ಕಂಬಗಳ ಮೇಲೆ ಮರ ಬಿದ್ದು ಕೇಬಲ್ ತುಂಡಾಗಿದೆ. ಶೀಘ್ರ ದುರಸ್ತಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪಟಾಕಿಯಂತೆ ಸಿಡಿಯುತ್ತಿರುವ ಕೇಬಲ್: ಕೇಬಲ್ ಅಳವಡಿಕೆ ಸಂದರ್ಭ ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕೇಬಲ್ ಒಳಭಾಗದ ವಿದ್ಯುತ್ ತಂತಿಗಳು ತುಂಡಾಗಿದ್ದು ‘ಶಾರ್ಟ್ ಸಕ್ರ್ಯೂಟ್’ ಮಾದರಿ ಹಾಗೂ ಬಾಳೆಲೆ ಪೆÇಲೀಸ್ ಉಪಠಾಣೆ ಮುಂಭಾಗ ಕೇಬಲ್ ಅಂತ್ಯಗೊಂಡ ಸ್ಥಳದಲ್ಲಿ ಪಟಾಕಿ ಸಿಡಿದ ಶಬ್ಧ ಹಾಗೂ ಬೆಂಕಿ ಕಿಡಿಗಳು ಕಾಣಿಸಿಕೊಳ್ಳುತ್ತಿದೆ. ಇದೊಂದು ಕಳಪೆ ಕಾಮಗಾರಿಯಾಗಿದ್ದು ರೂ.180 ಲಕ್ಷ ಅನುದಾನವನ್ನು ವ್ಯವಸ್ಥಿತವಾಗಿ ‘ಗುಳುಂ’ ಮಾಡುವ ಯೋಜನೆ ಇದಾಗಿರಬಹುದೆಂದು ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಗ್ರಾ.ಪಂ.ಮಾಜಿ ಸದಸ್ಯರಾದ ಪೆÇೀಡಮಾಡ ಸುಖೇಶ್, ಅಡ್ಡೇಂಗಡ ಅರುಣ್, ಅಡ್ದೇಂಗಡ ನವೀನ್, ಗ್ರಾಮದ ಹಿರಿಯರು, ಹೋರಾಟಗಾರ ಕೊಟ್ಟಗೇರಿಯ ಅರಮಣಮಾಡ ಸತೀಶ್ ದೇವಯ್ಯ ಅವರುಗಳು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯ ಬಗ್ಗೆ ಜನತೆಯಲ್ಲಿ ಸಂಶಯವಿದ್ದು, ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.