ಪೊಲೀಸರನ್ನೇ ದಂಗುಬಡಿಸಿದ್ರು ಚೀನಾ ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಈ ಪುಟಾಣಿಗಳು!

0
1082

ಅಲಿಗರ್: ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಯೋಧರನ್ನು ಕೊಂಡ ಚೀನಾ ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ 10 ಮಂದಿ ದೇಶಪ್ರೇಮಿ ಮಕ್ಕಳನ್ನು ಪೊಲೀಸರು ತಡೆದು ಬುದ್ದಿವಾದ ಹೇಳಿ ಮತ್ತೆ ಮನೆಗೆ ಕಳುಹಿಸಿದ ಘಟನೆಯೊಂದು ಅಲಿಗರ್‌‌‌ನಲ್ಲಿ ನಡೆದಿದೆ.
ಸೇಡು ತೀರಿಸಿಕೊಳ್ಳಲು ಹೋಗುತ್ತಿದ್ದೇವೆ…
ಹತ್ತು ಮಂದಿ ಮಕ್ಕಳು ಗುಂಪಾಗಿ ತೆರಳುತ್ತಿರುವುದನ್ನು ಕಂಡ ಪೊಲೀಸ್ರು ಅವರನ್ನು ತಡೆದು ವಿಚಾರಿಸಿದಾಗ ಬೆಚ್ಚಿಬೀಳುವ ಅಂಶ ಬಯಲಿಗೆ ಬಂದಿದೆ. ನಾವು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗುತ್ತಿದ್ದೇವೆ. ಅವರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ, ನಮ್ಮನ್ನು ಹೋಗಲು ಬಿಡಿ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಈ ಪುಟಾಣಿ ದೇಶಪ್ರೇಮಿಗಳು! ಕ್ಷಣ ಕಾಲದ ಬಳಿಕ ಸುಧಾರಿಸಿಕೊಂಡ ಪೊಲೀಸರು, ನೀವು ಇನ್ನೂ ಚಿಕ್ಕವರು, ಬೆಳೆದು ದೊಡ್ಡವರಾಗಿ ಸೇನೆಗೆ ಸೇರಿ. ಅಲ್ಲಿಯವರೆಗೆ ಶತ್ರುಗಳ ವಿರುದ್ಧ ಹೋರಾಡುವ ಅಗತ್ಯವಿಲ್ಲ. ಶತ್ರುಗಳ ವಿರುದ್ಧ ನಾನು ಹೋರಾಡುತ್ತೇವೆ, ನೀವು ಮನೆಯಲ್ಲೇ ಇದ್ದು ನಿಮ್ಮ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಎಂದು ಬುದ್ದಿವಾದ ಹೇಳಿದ್ದಾರೆ. ಜೊತೆಗೆ ಮಕ್ಕಳು ತಾಯ್ನಾಡಿನ ಮೇಲಿಟ್ಟಿರುವ ಪ್ರೀತಿಯನ್ನು ಶ್ಲಾಘಿಸಿದ್ದಾರೆ.
ದೇಶದೊಳಗೇ ಇದ್ದುಕೊಂಡು ದೇಶವಿರೋಧಿ ಹೇಳಿಕೆ, ಚಟುವಟಿಕೆ ಮಾಡುವವರ ನಡುವೆ ಈ ಪುಟಾಣಿಗಳ ದೇಶಪ್ರೇಮ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ!

LEAVE A REPLY

Please enter your comment!
Please enter your name here