ಬೀಜಿಂಗ್: ಕೊರೋನಾ ವೈರಾಣು ದಾಳಿಯಿಂದಾಗಿ ಕಂಗೇಟ್ಟಿರುವ ಚೀನಾದಲ್ಲಿ ಕೈದಿಗಳಿಗೆ, ಪೊಲೀಸರಿಗೆ ಸಾವಿನ ಭೀತಿ ಆರಂಭವಾಗಿದೆ.
ಕೋವಿಡ್ -19 ಗೆ ಈಗಾಗಲೇ 2,236 ಮಂದಿ ಮೃತಪಟ್ಟಿದ್ದು, ಈ ವೈರಾಣು ಸೋಂಕಿಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕೋವಿಡ್ – 19 ಜೈಲುಗಳಿಗೂ ಲಗ್ಗೆ ಇಟ್ಟಿದ್ದು, ಕೈದಿಗಳಲ್ಲಿ, ಪೊಲೀಸರಲ್ಲಿ ಆತಂಕ ಹುಟ್ಟಿಸಿದೆ.
ಚೀನಾದ ಕ್ಸಿನ್ ಜಿಯಾಂಗ್ ಉಯಿಗುರ್ ಅಟೋನೋಮಸ್ ಪ್ರದೇಶದಲ್ಲಿರುವ ಜೈಲುಗಳಲ್ಲಿ ಅತ್ಯಾಧಿಕ ಕೈದಿಗಳಿದ್ದು ಕೊರೋನಾ ಸೋಂಕಿನ ಬಗ್ಗೆ ದೊಡ್ಡ ಚಿಂತೆಯ ವಿಷಯವಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಸರ್ಕಾರದ ಮಾಹಿತಿ ಪ್ರಕಾರ, ಸುಮಾರು 450 ಕೈದಿಗಳಿಗೆ ಹಾಗೂ ಪೊಲೀಸರಿಗೆ ಕೊರೊನಾ ವೈರಸ್ ತಗುಲಿದೆ. ಹುಬೈ ಪ್ರಾಂತ್ಯದ ಜೈಲು ಸೇರಿದಂತೆ ಹಲವು ಜೈಲುಗಳಲ್ಲಿ ಕೊರೊನಾ ಭೀತಿ ಅಧಿಕವಾಗಿದೆ ಎಂದು ಹೇಳಿದೆ.