ಬೆಂಗಳೂರು: ಮಾಸ್ಕ್ ಧರಿಸದೇ ಇರುವವರಿಗೆ ಕೇಸ್ ಹಾಕುತ್ತಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮೂವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಕಾರ್ಲ್ ಮಾರ್ಕ್ಸ್(25), ವಿದ್ಯಾರಣ್ಯ ಪುರದ ಶಿವಕುಮಾರ್(54), ಮನೋರಾಯನಪಾಳ್ಯದ ಎಸ್.ಬಾಬು(40) ಬಂತ ಆರೋಪಿಗಳು.
ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಾಪ್ತಿಯಲ್ಲಿ ಅ.13 ರಂದು ಬಿಬಿಎಂಪಿ ಮಾರ್ಷಲ್ ಮುನಿರಾಜುನೊಂದಿಗೆ ಮಾಸ್ಕ್ ಧರಿಸದೆ ಇರುವವರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ಮೇಲೆ ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಅಶ್ವಥಯ್ಯ ಹಾಗೂ ಸಿಬ್ಬಂದಿ ಮೇಲೆ ಗೋಕುಲ ಮೆಲ್ಸೆತುವೆ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟಾರ್ಸ್ ಗ್ಯಾರೇಜ್ ಮುಂದೆ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕಾರ್ಲ್ಮಾಕ್ಸ್ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ. ಈತನಿಗೆ ಕೊರೋನಾ ಸೋಂಕಿನ ಬಗ್ಗೆ ತಿಳಿ ಹೇಳುತ್ತಿದ್ದಾಗ, ಲೋರ್ ನನ್ನ ಮಕ್ಳು ಪೊಲೀಸರು, ಮಾಡೋಕೆ ಏನೂ ಬೇರೆ ಕೆಲಸ ಇಲ್ಲ ಎಂದು ಬಾಯಿಗೆ ಬಂದಂತೆ ಬೈದಿದ್ದಾನೆ. ಯಾಕೆ ಬೈಯುತ್ತಿದ್ದೀರಿ ಎಂದು ಪೊಲೀಸರು ಕೇಳುತ್ತಿದ್ದಾಗ ಗ್ಯಾಾರೇಜ್ನಲ್ಲಿದ್ದ ಕಾರ್ಲ್ ಮಾರ್ಕ್ಸ್ ಅಲ್ಲಿಗೆ ಬಂದು ನಮಗೇನು ಕರೋನಾ ಇದೆಯೇ ನಾವು ಯಾಕೆ ಮಾಸ್ಕ್ ಹಾಕಬೇಕು, ನಾವು ಮಾಸ್ಕ್ ಹಾಕುವುದಿಲ್ಲ, ದಂಡನು ಕಟ್ಟುವುದಿಲ್ಲ ಏನು ಮಾಡಿಕೊಳುತ್ತೀರೋ ಮಾಡಿಕೊಳ್ಳಿ ಎಂದಿದ್ದಲ್ಲದೇ ಏಕಾಏಕಿ ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆ. ನಂತರ ಸಮವಸ್ತ್ರ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಮೂವರು ಆರೋಪಿಗಳ ವಿರುದ್ಧ ಕಲಂ 353, 332, 504 ರೆ/ವಿ 34 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.