Friday, July 1, 2022

Latest Posts

ಪೊಲೀಸ್ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯ: 17 ರನಗಳ ಅಂತರದಿಂದ ಗೆದ್ದ ಮಾಧ್ಯಮ ತಂಡ

ಹೊಸ ದಿಗಂತ ವರದಿ, ಕಲಬುರಗಿ:

ಪೋಲಿಸ್ ಇಲಾಖೆ ಹಾಗೂ ಜಿಲ್ಲೆಯ ಮಾಧ್ಯಮ ಬಳಗದಿಂದ ನಗರದ ಪೋಲಿಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ
ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮದ ತಂಡ 17 ರನ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಭಾನುವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಪೋಲಿಸ್ ಇಲಾಖೆ ಟಾಸ್ ಗೆದ್ದು ಮಾಧ್ಯಮ ತಂಡಕ್ಕೆ ಮೊದಲ ಇನ್ನಿಂಗ್ಸ್ ಆಡಲು ಕೊಟ್ಟಾಗ ಸಂಜಯ ಹಾಗೂ ಅಮ್ಜದ್ ಆಟವನ್ನು ಅತೀ ಉತ್ತಮವಾಗಿ ಪ್ರಾರಂಬಿಸಿ, 12 ಓವರಗಳಲ್ಲಿ 143 ರನ್ಗಳ ಮೊತ್ತವನ್ನು ಏರಿಸಿದರು.
ನಂತರ ಎರಡನೇ ಇನ್ನಿಂಗ್ಸ ಪ್ರಾರಂಭ ಮಾಡಿದ ಪೋಲಿಸ್ ಇಲಾಖೆ ತಂಡ 126 ರನ್ ಮಾಡುವಲ್ಲಿ ಮಾತ್ರ ಯಶಸ್ವಿಯಾಯಿಯ.
ಈ ಸಂದರ್ಭದಲ್ಲಿ ಅತೀ ಹೆಚ್ಚು ರನ್ ಗಳನ್ನು ಮಾಡಿದ ಸಂಜಯ ವರಿಗೆ ಪಂದ್ಯದ ಶ್ರೇಷ್ಟ ಆಟಗಾರವೆಂದು ಟ್ರೋಫಿ ನೀಡಲಾಯಿತು.
ಅದರಂತೆ ಗೆಲವು ದಾಖಲಿಸಲು ಮಹತ್ವದ ತಿರುವು ನೀಡಿದ ಪುರುಷೋತ್ತಮ ಅವರ ಎಸೆತದಿಂದ ಪೋಲಿಸ್ ತಂಡದ ಮಹತ್ವದ ವಿಕೆಟ ಪತನಗೊಂಡಿತು. ಆ ಮಹತ್ವದ ವಿಕೆಟನನ್ನು ರಾಧಾಕೃಷ್ಣರು ಕ್ಯಾಚ ಹಿಡಿಯುವ ಮೂಲಕ ಜಯದ ಹೊಸ್ತಿಲಿನಲ್ಲಿ ಮಾದ್ಯಮ ತಂಡಕ್ಕೆ ಕರೆದುಕೊಂಡು ಹೋದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಅವರ ನೇತ್ರತ್ವದಲ್ಲಿ ಟ್ರೋಫಿಯನ್ನು ತಂಡದ ಮುಖ್ಯಸ್ಥ ಪ್ರವೀಣ ಕುಮಾರ ಸ್ವೀಕರಿಸದರು. ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಎಲ್ಲ ಹಿರಿಯ,ಕಿರಿಯ ಅಧಿಕಾರಿಗಳು ಸೇರಿದಂತೆ ಬಾಬುರಾವ ಯಡ್ರಾಮಿ, ದೇವೆಂದ್ರಪ್ಪ ಅವಂಟಿ, ಹಣಮಂತರಾಯ ಭೈರಾಮಡಗಿ, ಶೇಷಮೂರ್ತಿ ಅವಧಾನಿ, ಅರುಣ, ಅನಿಲ ಸ್ವಾಮಿ, ವಿಜಯಕುಮಾರ, ಶಂಕರ, ಸೇರಿದಂತೆ ಹಲವಾರು ದ್ಯಶ್ಯ ಮಾದ್ಯಮ ಹಾಗೂ ಮುದ್ರಣ ಮಾದ್ಯಮದ ವರದಿಗಾರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss