Thursday, July 7, 2022

Latest Posts

ಪೊಲೀಸ್ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕೊರೋನಾ: ಇನ್ಮುಂದೆ ಯಾವುದೇ ಕಾರ್ಯಕ್ರಮಗಳಲ್ಲಿ ಪೊಲೀಸರು ಭಾಗಿಯಾಗುವಂತಿಲ್ಲ..

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಯಲ್ಲೂ ಸೋಂಕು ವ್ಯಾಪಿಸುತ್ತಿದೆ. ಪೊಲೀಸ್ ಠಾಣೆಯನ್ನೇ ಸೀಲ್ ಡೌನ್ ಮಾಡಬೇಕಾದ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಇದೀಗ ಬಳ್ಳಾರಿ ಎಸ್ ಪಿ ಸಿಕೆ ಬಾಬಾ ಪೊಲೀಸರಿಗೆ ಆದೇಶವೊಂದನ್ನು ಹೊರಡಿಸಿದ್ದಾರೆ.
ಇನ್ನು ಮುಂದೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಯಾವುದೇ ರೀತಿಯ ಕಾರ್ಯಕ್ರಮ, ಪಾರ್ಟಿಗಳಿಗೆ ಹಾಜರಾಗುವಂತಿಲ್ಲ. ಮದುವೆ ನಾಮಕರಣ ಸೇರಿದಂತೆ ಯಾವುದೇ ಪಾರ್ಟಿಗಳಿಗೆ ಭಾಗಿಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿದ್ದರೆ ಎಸ್ ಪಿ ಕಚೇರಿಯಿಂದ ಪೂರ್ವಾನುಮತಿ ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಆದೇಶ ಹೊರಡಿಸಿದ್ದಾರೆ.
ಮೊನ್ನೆಯಷ್ಟೇ ಕಂಪ್ಲಿಯ ಎಸ್ ಐ ಒಬ್ಬರು ಮಾಡಿದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹಾಗಾಗಿ ಇಡೀ ಠಾಣೆಯನ್ನೇ ಸೀಲ್ ಮಾಡಲಾಗಿತ್ತು. ಹೀಗಾಗಿ ಇನ್ನು ಮುಂದೆ ಇಂಥ ಯಾವುದೇ ರೀತಿಯ ಪಾರ್ಟಿ, ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss