Thursday, June 30, 2022

Latest Posts

ಪೊಲೀಸ್ ಇಲಾಖೆ ಅಂದರೆ ಭಯ ಬೇಡ: ಪಿಎಸ್’ಐ ಮಂಜಾಳಕರ್

ಹೊಸದಿಗಂತ ವರದಿ, ಕಲಬುರಗಿ:

ಪೊಲೀಸ್ ಇಲಾಖೆ ಅಂದರೆ ಕೇವಲ ಅರಿವು ಮೂಡಿಸುವ ಕಾಯ೯ವಾಗಿದೆ ಹೀಗಾಗಿ ಪೋಲಿಸ ಇಲಾಖೆ ಎಂದರೆ ಯಾರಲ್ಲಿಯೂ ಭಯವಿರಬಾರದು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಚೌಕ ಪೊಲೀಸ್ ಠಾಣೆಯ ಪಿಎಸ್’ಐ ಬಸವರಾಜ ಮಂಜಾಳಕರ್ ಹೇಳಿದರು.

ಅವರು ನಗರದ ಶಹಾಬಜಾರದ ಲಾಲ್ ಹನುಮಾನ ಮಂದಿರದ ಬಳಿ ರೇವಣ ಸಿದ್ಧ ಪಟ್ಟಣ ಹಾಗೂ ಹಿರಾ ಮಕ್ಕಳರ್ ಜೊತೆಗೂಡೀ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ. ಅನ್ಯಾಯಧ ವಿರುದ್ಧ ಧ್ವನಿ ಎತ್ತುವ ಮೂಲಕ ಪೊಲೀಸ್ ಇಲಾಖೆ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುತ್ತಿದೆ ಎಂದರು.

ಈ ‌ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭುಲಿಂಗ ಹಾದಿಮನಿ,ಚಂದ್ರಕಾಂತ ಹಂಗರಗಿ, ರಾಜಕುಮಾರ್ ಎಂಪುರೆ,ಕಿಶೋರ ಆರಾಧೆ. ಶ್ರೀ ಮಂತ ಗುತ್ತೇದಾರ, ಶಿವು ಸ್ವಾಮಿ, ಸಚಿನ ಕಡಗಂಚಿ, ಸಂಜು ಮಂಜಾಳಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss