spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ಯಾಕೇಜ್ ಮಾಡದ ಸಿಹಿತಿಂಡಿಗಳಲ್ಲಿ ಇನ್ಮುಂದೆ ‘ಬೆಸ್ಟ್ ಬಿಫೋರ್’ ಲೇಬಲ್‌ ಕಡ್ಡಾಯ: FSSAI ಆದೇಶ

- Advertisement -Nitte

ಹೊಸದಿಲ್ಲಿ: ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ ಆಹಾರ ವ್ಯವಹಾರ ನಿರ್ವಾಹಕರು ಪ್ಯಾಕೇಜ್ ಮಾಡದ ಸಿಹಿತಿಂಡಿಗಳನ್ನು ‘ಬೆಸ್ಟ್ ಬಿಫೋರ್’ ಲೇಬಲ್‌ ಪ್ರದರ್ಶಿಸುವುದು ಕಡ್ಡಾಯಗೊಳಿಸಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಕ್ಟೋಬರ್ 1 ರಿಂದ ಈ ನಿಯಂತ್ರಣ ಜಾರಿಗೆ ಬರಲಿದೆ.
ಎಫ್‌ಎಸ್‌ಎಸ್‌ಎಐ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತೆಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಾರ್ವಜನಿಕ ಹಿತಾಸಕ್ತಿಮತ್ತು ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪೊಟ್ಟಣರಹಿತ/ ಸಡಿಲವಾದ ಸಿಹಿತಿಂಡಿಗಳ ಸಂದರ್ಭದಲ್ಲಿ, ಮಾರಾಟಕ್ಕಾಗಿ ಔಟ್ ಲೆಟ್ ನಲ್ಲಿ ಕಂಟೈನರ್/ಟ್ರೇ ಹೊಂದಿರುವ ಸಿಹಿತಿಂಡಿಗಳನ್ನು ಅಕ್ಟೋಬರ್ 1, 2020 ರಿಂದ ಕಡ್ಡಾಯವಾಗಿ ‘ಬೆಸ್ಟ್ ಎವರ್ ಡೇಟ್’ ಪ್ರದರ್ಶಿಸಬೇಕೆಂದು ಅಂತ ತಿಳಿಸಿದೆ.
ಆಹಾರ ವ್ಯವಹಾರ ನಿರ್ವಾಹಕರು (ಎಫ್‌ಬಿಒಗಳು) ಉತ್ಪಾದನೆಯ ದಿನಾಂಕವನ್ನು ಸಹ ಪ್ರದರ್ಶಿಸಬಹುದು, ಅದರೆ ಅದು ‘ಆದಾಗ್ಯೂ ಕಡ್ಡಾಯವಲ್ಲ’ ಅಂತ ತಿಳಿಸಿದೆ. ಉತ್ಪನ್ನಗಳ ಸ್ವರೂಪ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ‘ಬೆಸ್ಟ್‌ ಬಿಫೋರ್ ಡೇಟ್’ ಅನ್ನು ನಿರ್ಧರಿಸಲಾಗುತ್ತದೆ ಎಂದು ಎಫ್‌ಎಸ್‌ಎಸ್‌ಎಐ ಸೆಪ್ಟೆಂಬರ್ 25 ರ ಪತ್ರದಲ್ಲಿ ತಿಳಿಸಿದೆ. ಸಿಹಿತಿಂಡಿಗಳಲ್ಲಿ ವ್ಯವಹರಿಸುವ ಎಲ್ಲಾ ಎಫ್‌ಬಿಒಗಳು ಈ ನಿರ್ದೇಶನಗಳನ್ನು ಪಾಲಿಸಬೇಕು. ಆಹಾರ ಸುರಕ್ಷತಾ ಆಯುಕ್ತರು ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಅಂತ ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss