ನ್ಯೂಯಾರ್ಕ್: ಕೊರೋನಾ ಸೋಂಕಿಗೆ ಅಮೆರಿಕದ ಪ್ರಖ್ಯಾತ ಫುಟ್ ಬಾಲ್ ಆಟಗಾರ ಟಾಮ್ ಡೆಂಮ್ಸೆ(73) ಅವರು ನಿಧನರಾಗಿದ್ದಾರೆ.
19670ರಲ್ಲಿ ಎನ್.ಎಫ್.ಎಲ್ ನ ಫೀಲ್ಡ್ ಗೋಲ್ ಹೊಡೆದು ದಾಖಲೆ ಹೊಂದಿದ್ದ ಟಾಮ್ ಡೆಂಮ್ಸ್ ಅವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ಪಾಜಿಟಿವ್ ವರದಿ ಬಂದ ಬಳಿಕ ಹೋಮ್ ಕ್ವಾರಂಟೈನ್ ನಲ್ಲಿದ್ದರೂ ಸಹ ಅವರು ಶನಿವಾರ ಮೃತಪಟ್ಟಿದ್ದಾರೆ.
ಟಾಮ್ ಡೆಂಮ್ಸ್, ಹುಟ್ಟಿನಿಂದಲೂ ಬಲಗಾಲಿನ ಮತ್ತು ಬಲ ಕೈನಲ್ಲಿ ಬೆರಳುಗಳಿಲ್ಲದೆ ಜನಿಸಿದ್ದರು. ಆದರೂ 1970ರಲ್ಲಿ 63 ಯಾರ್ಡ್ ಅಂತರದಿಂದ ಗೋಲ್ ಹೊಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. 1969ರಿಂದ 1979ರ ದಶಕಗಳಿಲ್ಲಿ ಅವರು ನ್ಯೂ ಓರ್ಲಿಯನ್ಸ್, ಫಿಲಾಡೆಲ್ಫಿಯ, ಲಾಸ್ ಎಂಜಲೀಸ್, ಹಾಸ್ಟನ್ ಮತ್ತು ಬಫಾಲೋ ಪರ ಪಂದ್ಯವಾಡಿದ್ದರು.