ಪ್ರಜಾ ಪ್ರಭುತ್ವದ ಪಟ್ಟಿಯಲ್ಲಿ ಭಾರತ 51ನೇ ಸ್ಥಾನಕ್ಕೆ ಕುಸಿತ:“ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್”

0
211

ಹೊಸದಿಲ್ಲಿ:  ಜ.22 ರಂದು “ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್” ಬಿಡುಗೊಡೆ ಮಾಡಿದ ಪ್ರಜಾಪೌರತ್ವದಲ್ಲಿ ‘ನಾರ್ ವೇ’ ಮೊದಲ ಸ್ಥಾನ ಗಳಿಸಿದರೆ, ಐಲ್ಯಾಂಡ್ ಎರಡನೇ ಸ್ಥಾನ ಮತ್ತು ಸ್ವಿಡನ್ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ.

ಭಾರತ 2019ನೇ ವರ್ಷದ ಪ್ರಜಾಪೌರತ್ವ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದ್ದು, 2020ರಲ್ಲಿ 51ನೇ ಸ್ಥಾನಕ್ಕೆ ಇಳಿದಿದೆ. ಅಂದರೆ ಭಾರತ ಪ್ರಜಾಪೌರತ್ವದಲ್ಲಿ 10 ಸ್ಥಾನ ಕಳೆದುಕೊಂಡಿದೆ.

ಭಾರತದ ಈ ಸ್ಥಿತಿಗೆ ಕೇಂದ್ರ ಸರ್ಕಾರ ಜಾರಿಗೆತಂದಿರುವ ಪೌರತ್ವ ತಿದ್ದುಪಡೆ ಕಾಯ್ದೆ ಹಾಗೂ ನಾಗರೀಕರ ರಾಷ್ಟ್ರೀಯ ನೊಂದಣಿ ಕಾರಣ ಮತ್ತು ಜಮ್ಮು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕಾರಣ ಭಾರತದ ಪ್ರಜಾ ಪ್ರಭುತ್ವದ ಸ್ಥಾನ ಕುಸಿದಿದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ.

ವರದಿಯ ಪ್ರಕಾರ 2014ರಲ್ಲಿ ಭಾರತ 7.91 ಅಂಕದಿಂದ ದಾಖಲೆ ಮಾಡಿತ್ತು, ನಂತರ   2018ರಲ್ಲಿ 7.23 ಅಂಕವನ್ನು  ದಾಖಲಿಸಿತ್ತು 2019ರಲ್ಲಿ 6.9ಅಂಕ ಪಡೆದು ನಂತರ ಭಾರತ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಲೇ ಬಂದಿದೆ. ಆದರೆ 2020 ನೇ ಸಾಲಿನಲ್ಲಿಯೂ ಭಾರತ 5.44 ಅಂಕ ಪಡೆದು ಪ್ರಜಾ ಪೌರತ್ವದ ಪಟ್ಟಿಯಲ್ಲಿ 51ನೇ ಸ್ಥಾನಕ್ಕೆ ಇಳಿದಿದೆ.

LEAVE A REPLY

Please enter your comment!
Please enter your name here