Tuesday, August 9, 2022

Latest Posts

ಪ್ರತಿಕೂಲ ಹವಾಮಾನ: ಮುಂದುವರಿದ ಶೋಧ ಕಾರ್ಯ

ಮಡಿಕೇರಿ: ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ತಲಕಾವೇರಿಯ ಭೂಕುಸಿತ ಸ್ಥಳದಲ್ಲಿ ಕಾಣೆಯಾಗಿರುವ ಮೂವರಿಗಾಗಿ ಬುಧವಾರ ಹುಡುಕಾಟ ಮುಂದುವರಿದಿದೆ.

ತಲಕಾವೇರಿಯಲ್ಲಿ ದಟ್ಟ ಮಂಜು ಕವಿದಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಆದರೂ ಮಡಿಕೇರಿ ಆರಕ್ಷಕ ಉಪ ಅಧೀಕ್ಷಕರ ನೇತೃತ್ವದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

ಪೊಲೀಸ್, ಅಗ್ನಿಶಾಮಕ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್. ಮತ್ತು ಅರಣ್ಯ ಇಲಾಖೆಯ ರಕ್ಷಣಾ ತಂಡಗಳು ಸ್ಥಳದಲ್ಲೇ ಇದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss