Wednesday, June 29, 2022

Latest Posts

ಪ್ರತಿದಿನ ಈರುಳ್ಳಿ ತಿನ್ನುವುದರಿಂದ ಏನಾಗುತ್ತದೆ? ಈರುಳ್ಳಿ ತಿನ್ನುವವರಿಗೆ ಎಂದಿಗೂ ಈ ಕಾಯಿಲೆಗಳು ಬರುವುದಿಲ್ಲ..

ಅಡುಗೆ ಮನೆಯಲ್ಲಿ ಏನಿಲ್ಲ ಎಂದರೂ ಈರುಳ್ಳಿ ಒಂದಿದ್ದರೆ ಸಾಕು. ತರಕಾರಿ ಇಲ್ಲದಿದ್ದರೂ ಏನಾದರೂ ಒಂದು ಅಡುಗೆ ಮಾಡಿ ಮ್ಯಾನೇಜ್ ಮಾಡಬಹುದು. ಆದರೆ ಪ್ರತಿದಿನ ಈರುಳ್ಳು ಬಳಸುವ ನಾವು ಈರುಳ್ಳಿ ಬಗ್ಗೆ ಏನೂ ತಿಳಿಯುವುದಿಲ್ಲ. ಇನ್ನು ಕೆಲವೊಬ್ಬರು ಈರುಳ್ಳಿ ತಿನ್ನುವುದೂ ಇಲ್ಲ. ಆದರೆ ಈರುಳ್ಳಿ ನಮ್ಮ ದೇಹಕ್ಕೆ ಏನು ಮಾಡುತ್ತದೇ ಗೊತ್ತೆ?

  • ಒಂದು ಈರುಳ್ಳಿಯಲ್ಲಿ ಇಷ್ಟೆಲ್ಲಾ ಇದೆ: ಕ್ಯಾಲೊರಿ, ಕಾರ್ಬೋಹೈಡ್ರೇಟ್ಸ್,ಫೈಬರ್,ಪ್ರೋಟೀನ್, ವಿಟಮಿನ್ ಸಿ ಹಾಗೂ ವಿಟಮಿನ್ ಬಿ೬ ಇದೆ.
  • ಆರೋಗ್ಯಕರ ಹೃದಯ: ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ಈರುಳ್ಳಿ ಸಹಾಯಕ. ಹಸಿ ಈರುಳ್ಳಿ ತಿನ್ನುವುದರಿಂದ ನಿಮ್ಮ ಹೃದಯ ಆರೋಗ್ಯಕರವಾಗಿರಲಿದೆ.
  • ವಿಟಮಿನ್‌ಸಿ: ಹಸಿ ಈರುಳ್ಳಿಯಲ್ಲಿರುವ ವಿಟಮಿನ್ ಸಿ ನಮ್ಮ ಇಮ್ಯುನಿಟಿ ಹೆಚ್ಚಿಸುತ್ತದೆ. ಯಾವುದೇ ರೋಗಗಳು ಬಾರದಂತೆ ನಮ್ಮ ದೇಹವನ್ನು ತಯಾರು ಮಾಡುತ್ತದೆ.
  • ಕ್ಯಾನ್ಸರ್: ಈರುಳ್ಳಿಯಲ್ಲಿರುವ ಕ್ವರ‍್ಸೆಟಿನ್ ಎಂಬ ಕಾಂಪೌಂಡ್‌ನಿಂದ ಕ್ಯಾನ್ಸರ್ ಬರುವುದು ತಡೆಗಟ್ಟುತ್ತದೆ. ಹೊಟ್ಟೆ ಹಾಗೂ ಅಲ್ಸರ್ ಕ್ಯಾನ್ಸರ್ ಬರುವುದಿಲ್ಲ.
  • ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ: ಇದರಲ್ಲಿರುವ ಕ್ರೋಮಿಯಂ ಎಂಬ ಪದಾರ್ಥ ಬೇರೆ ತರಕಾರಿಗಳಲ್ಲೂ ಇದೆ. ಇದು ಬ್ಲಡ್ ಶುಗರ್ ಕಡಿಮೆ ಮಾಡಲು, ಸಮವಾಗಿಡಲು ಸಹಾಯ ಮಾಡುತ್ತದೆ.
  • ಜ್ವರಕ್ಕೆ ಔಷಧ: ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ ತಿಂದರೆ ಇದು ಜ್ವರ, ಶೀತ ಹಾಗೂ ಅಲರ್ಜಿಗೆ ರಾಮಬಾಣ.
  • ಮೂಗಿನಲ್ಲಿ ರಕ್ತ?: ಕೆಲವರಿಗೆ ಹೀಟ್ ಆಗಿ ಮೂಗಿನಲ್ಲಿ ರಕ್ತ ಬರುತ್ತದೆ. ಆಗ ಈರುಳ್ಳಿಯ ಒಂದು ಪೀಸ್‌ನ್ನು ಮೂಗಿಗೆ ಇಟ್ಟುಕೊಳ್ಳಿ. ಸ್ವಲ್ಪ ಸಮಯ ವಾಸನೆ ತೆಗೆದುಕೊಳ್ಳಿ ಹೀಗೆ ಮಾಡುತ್ತಿದ್ದರೆ ರಕ್ತ ನಿಲ್ಲುತ್ತದೆ.
  • ಊಟ,ನಿದ್ದೆ,ಡಿಪ್ರೆಶನ್: ಹಸಿ ಈರುಳ್ಳಿಯಲ್ಲಿ ಫೋಲೇಟ್ ಎನ್ನುವ ಕಾಂಪೌಂಡ್ ಇದೆ. ಅದರಲ್ಲಿ ಡಿಪ್ರೆಶನ್, ನಿದ್ದೆ ಹಾಗೂ ಹೊಟ್ಟೆ ಹಸಿವು ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳುತ್ತದೆ.
  • ಹಲ್ಲುಗಳ ಆರೋಗ್ಯ: ಹಲ್ಲು ಬಾಯಿ,ಒಸಡಿನ ಆರೋಗ್ಯವನ್ನು ಈರುಳ್ಳಿ ಕಾಪಾಡುತ್ತದೆ. ಹಸಿ ಈರುಳ್ಳಿಯನ್ನು ಬಾಯಲ್ಲಿ ಜಗಿದು ತಿನ್ನಬೇಕು. ಇದರಿಂದ ಬಾಯಿ ವಾಸನೆ ಆಗುತ್ತದೆ. ಆದರೆ ಹಲ್ಲು,ಒಸಡು ನೋವು ಹೋಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss