ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶ ನೀಡುವುದಕ್ಕೆ ಸಹಕಾರಿಯಾಗಲಿದೆ. ಅದರಲ್ಲೂ ಎಲ್ಲರ ಫೇವರೇಟ್ ಹಣ್ಣು ಸಪೋಟ.. ಪ್ರತಿದಿನ ಚಿಕ್ಕೂ ಹಣ್ಣು ಸೇವಿಸುವುದರಿಂದ ಏನು ಲಾಭ? ಅದರಲ್ಲಿನ ಆರೋಗ್ಯಕರ ಲಕ್ಷಣಗಳು ಇಲ್ಲಿವೆ..
ಮೂಳೆಗಳಿಗೆ ಬಲ: ಸಪೋಟದಲ್ಲಿನ ಕ್ಯಾಲ್ಶಿಯಂ, ಪ್ರೋಸ್ಪರಸ್ ಅಂಶಗಳು ಮೂಳೆಗಳಿಗೆ ಶಕ್ತಿ ಕೊಡುವುದು ಮಾತ್ರವಲ್ಲದೆ ಮೂಳೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಜೀರ್ಣಕ್ರಿಯೆ: ಸಪೋಟ ಹಣ್ಣು ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಸಪೋಟ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ರಕ್ತದೊತ್ತಡ ನಿಗ್ರಹ: ಸಪೋಟ ಹಣ್ಣಿನಲ್ಲಿರುವ ಪೊಟಾಶಿಯಂ ಅಂಶವು ನಮ್ಮ ದೇಹದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ.
ತ್ವಚೆಗೆ ಕಾಂತಿ: ಸಪೋಟದಲ್ಲಿರುವ ವಿಟಮಿನ್ ಎ,ಸಿ,ಇ ನಮ್ಮ ತ್ವಚೆಗೆ ಕಾಂತಿ ಹೆಚ್ಚಿಸುವುದಕ್ಕೆ ಸಹಕಾರಿಯಾಗಲಿದೆ.
ಬಾಯಿ ಕ್ಯಾನ್ಸರ್ ನಿವಾರಕ: ಹಣ್ಣಿನಲ್ಲಿರುವ ವಿಟಮಿನ್ಸ್ ಗಳು ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ತಡೆಯುವಲ್ಲಿ ಸಹಕಾರಿಯಾಗಲಿದೆ.