Monday, August 8, 2022

Latest Posts

ಪ್ರತಿಭಾ ಪುರಸ್ಕಾರದ 5000 ಸಾವಿರ ಹಣವನ್ನು ಸಿಎಂ ನಿಧಿಗೆ ನೀಡಿ ಮಾನವೀಯತೆ ಮೆರೆದ ವಿದ್ಯಾರ್ಥಿನಿ ಎಂ. ಸಹನಾ

ಮೈಸೂರು: ಲಾಕ್ ಡೌನ್ ಆಗಿ ಜನರು ಊಟಕ್ಕೂ ಪರದಾಡುತ್ತಿದ್ದಾರೆ‌. ಒಂದಷ್ಟು ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಆದರೆ ಕುವೆಂಪು ನಗರದ ನಿವಾಸಿ, ಜೆಎಸ್ಎಸ್ ವಾಕ್ ಹಾಗೂ ಶ್ರವಣ ಸಂಸ್ಥೆ ವಿದ್ಯಾರ್ಥಿನಿ ಹಾಗು ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆ ಲಕ್ಷ್ಮಿದೇವಿ ಪುತ್ರಿ ಎಂ.ಸಹನಾ SSLC ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದಕ್ಕೆ ಪ್ರತಿಭಾ ಪುರಸ್ಕಾರ ನೀಡಿದ್ದ 5ಸಾವಿರ ರೂ ಹಣವನ್ನ ಜನರ ಸಹಾಯಕ್ಕೆ ಆಗಲೆಂದು ಸಿಎಂ ನಿಧಿಗೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರಿಗೆ ನೀಡಿ ಮಾನವೀಯತೆ ಮೆರೆದಿದ್ದಾಳೆ. ಈ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕ ಅಶೋಕ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ. ಮಹದೇವಸ್ವಾಮಿ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss