Tuesday, July 5, 2022

Latest Posts

ಪ್ರತಿಯೊಬ್ಬರು ಕಾಡನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು: ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ

ಮೈಸೂರು: ನಾಡಿಗೆ ಜೀವವೇ ಕಾಡು, ನಾಡು ಇಲ್ಲದೆಯೂ ಕಾಡು ಇರತ್ತೆ, ಆದರೆ ಕಾಡು ಇಲ್ಲದೆ ನಾಡು ಇರಲು ಎಂದಿಗೂ ಸಾಧ್ಯವಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದರು.

ಶುಕ್ರವಾರ ಅರಣ್ಯ ಭವನದ ಆವರಣದಲ್ಲಿರುವ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿ ಮೈಸೂರು ಅರಣ್ಯ ವೃತ್ತ ವತಿಯಿಂದ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಜೀವಿ, ಮರ ಗಿಡ, ಪ್ರಾಣಿ ಪಕ್ಷಿ ಎಲ್ಲವಕ್ಕೂ ಆಸರೆಯಾಗಿರತಕ್ಕಂತಹ ಅರಣ್ಯವನ್ನು ಉಳಿಸಿ ಬೆಳೆಸತಕ್ಕಂತದ್ದು ಎಷ್ಟು ಉನ್ನತವಾದ ಕೆಲಸ, ಪ್ರಾಮುಖ್ಯವಾದ ಕೆಲಸ ಎನ್ನುವುದರ ಅರಿವಾಗತ್ತೆ. ಮಗುವಾಗಿದ್ದಾಗಿನಿಂದ ದೊಡ್ಡವರಾಗಿ ಬೆಳೆಯುವವರೆಗೂ ಈ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಲ್ಲಿ ಈ ಕಾಳಜಿಯನ್ನು ಉಂಟು ಮಾಡುವ ರೀತಿಯಲ್ಲಿ ನಾವು ವರ್ತಿಸಬೇಕು. ಹಾಗಾದಾಗ ಮಾತ್ರ ಈ ಹುತಾತ್ಮರಾದವರ ಎಲ್ಲರ ಧ್ಯೇಯಗಳನ್ನು ಕಾಳಜಿಯನ್ನು ಗೌರವಿಸದಂತಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಮುಂದುವರಿಯೋಣ. ಅದು ಅವರನ್ನು ನೆನೆಯುವಷ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಧ್ಯೇಯಗಳನ್ನು ಒಗ್ಗೂಡಿಸಿಕೊಂಡು ಅವರ ದಾರಿ ದೀಪದಲ್ಲಿ ನಾವು ಮುಂದೆ ಸಾಗೋಣ ಎಂದು ತಿಳಿಸಿದರು.

ಹುತಾತ್ಮರ ದಿನಾಚರಣೆ ಈ ಸಂದರ್ಭದಲ್ಲಿ ಆತ್ಮೀಯ ಸ್ನೇಹಿತ, ಸಹೋದ್ಯೋಗಿಯಾದ ಹುತಾತ್ಮ ಅರಣ್ಯಾಧಿಕಾರಿ ಎಸ್.ಮಣಿಕಂದನ್ ಅವರೊಂದಿಗಿನ ನನ್ನ ಒಡನಾಟವನ್ನು ನೆನಪಿಸಿಕೊಂಡಾಗ, ಅವರ ಅಮೂಲ್ಯ ವ್ಯಕ್ತಿತ್ವ, ಧ್ಯೇಯಗಳು ಎಂದಿಗೂ ಕೂಡ ನಮಗೆ ಮಾರ್ಗದರ್ಶನವಾಗಿರಬೇಕು ಅಂತ ಅನಿಸುತ್ತದೆ. . ಬಳ್ಳಾರಿಯಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೀವಿ. ಅಂದಿನಿAದ ಅವರ ಧ್ಯೇಯಗಳನ್ನು ನಾವು ಪ್ರತಿ ಕ್ಷಣದಲ್ಲೂ ಕೂಡ ತ್ಯಾಗಕ್ಕಾಗಲಿ, ಕಠಿಣ ಮತ್ತು ಕಾಳಜಿಯುಳ್ಳ ನಿರ್ಧಾರ ತೆಗೆದುಕೊಳ್ಳಲಿಕ್ಕಾಗಲಿ ಅವರು ಬದ್ಧರಾಗಿರತಕ್ಕಂತದ್ದನ್ನು ನೆನೆದಾಗ ಅತ್ಯಂತ ಗೌರವ ಅನಿಸತ್ತೆ ಎಂದರು.

ತಮ್ಮ ಕರ್ತವ್ಯದ ಒಂದು ಕರೆಗೆ ಓಗೊಟ್ಟು ಅವರು ಅರಣ್ಯ ಉಳಿಸಲಿಕ್ಕೆ ಅಥವಾ ಅರಣ್ಯ ಕಾಪಾಡಲಿಕ್ಕೆ ಹುತಾತ್ಮರಾದರು ಅಂತ ಹೇಳಲು ಬಯಸುವುದಿಲ್ಲ. ಹಾಗೆ ಹೇಳಿದರೆ ಅವರ ಒಂದು ಹಿರಿಮೆಯನ್ನು ಕೊಂಚ ಕಡಿಮೆ ಮಾಡಿದಂತೆ ಅನಿಸತ್ತೆ. ಅವರು ಮನುಕುಲ ಉಳಿಸಲಿಕ್ಕೆ , ಮಾನವ ಪೀಳಿಗೆಯನ್ನು ಉಳಿಸಲಿಕ್ಕೆ ಎಲ್ಲ ಜೀವ ವೈವಿಧ್ಯವನ್ನು ಉಳಿಸಲಿಕ್ಕೆ ಹುತಾತ್ಮರಾಗಿದ್ದಾರೆ ಅಂತ ಹೇಳುವುದು ಅತ್ಯಂತ ಸೂಕ್ತ. ಯಾಕೆಂದರೆ ಈ ಮನುಷ್ಯ ಕೂಡ ಒಮ್ಮೆ ಕಾಡಿನ ವಾಸಿಯಾಗಿದ್ದ, `ಕಾಡು’ ಮಾನವನ ಮೊದಲು `ತೊಟ್ಟಿಲು’ ಆದರೆ ಕ್ರಮೇಣ ಕಾಡಿನಿಂದ ಮನುಷ್ಯ ನಾಡಿಗೆ ಬಂದಾಗ ನಾಡೇ ಪ್ರಮುಖವೆನಿಸಿ ಕಾಡು ಅಳಿವಿನತ್ತ ಹೋಗುವುದನ್ನು ನಾವು ಕಂಡೆವು. ಆ ನಿಟ್ಟಿನಲ್ಲಿ ಕಾಡನ್ನು ಉಳಿಸಿ, ಅರಣ್ಯ ಉಳಿಸಿ ಅಭಿಯಾನ ಆರಂಭವಾಯಿತು ಎಂದು ತಿಳಿಸಿದರು.

ಹುಲಿಯೋಜನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್ ಅವರು, ಹುತಾತ್ಮರಾದ ಎಸ್.ಮಣಿಕಂದನ್, ಎಂ.ಮಹೇಶ್, ಶಿವಕುಮಾರ್ ಸೇರಿ ೫೦ಮಂದಿಯನ್ನು ಸ್ಮರಿಸಿದರು. ನಿಷ್ಠೆಯಿಂದ ಕೆಲಸ ಮಾಡುತ್ತಿರುವಾಗಲೇ ಇವರೆಲ್ಲ ಹುತಾತ್ಮರಾಗಿದ್ದಾರೆ. ಇವರ ನಿಷ್ಠೆ, ಕಾರ್ಯತತ್ಪರತೆ ನಮಗೆಲ್ಲ ಮಾರ್ಗದರ್ಶಕವಾಗಬೇಕು ಎಂದರು.

ಇದೇ ವೇಳೆ ಹುತಾತ್ಮರಾದವರಿಗೆ ಗೌರವಾರ್ಥವಾಗಿ ವಾಲಿ ಫೈರಿಂಗ್ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಕೆ.ಸಿ.ಪ್ರಶಾಂತ್, ಎಂ.ಸಿ.ಅಲೆಗ್ಸಾAಡರ್, ಪಿ.ಶ್ರೀಧರ್, ಎ.ಟಿ.ಪೂವಯ್ಯ, ಕೆ.ಸುರೇಶ್,ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಕಂಟ್ರಾಕ್ಟರ್ ದೀಪ, ಪುಟ್ಟ ಮಾದೇಗೌಡ, ಕಾಳೇಗೌಡ, ಬೋರೇಗೌಡ, ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss