spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಇಶಾಂತ್ ಶರ್ಮಾ ಸಹಿತ 29 ಮಂದಿಯ ಹೆಸರು ಶಿಫಾರಸು

- Advertisement -Nitte

ನವದೆಹಲಿ: ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಸೇರಿ ಒಟ್ಟು 29 ಮಂದಿಯ ಹೆಸರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿದೆ. ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ಈ ಬಾರಿ 29 ಮಂದಿಯಪಟ್ಟಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.
ಈ ವರ್ಷದ ಅರ್ಜುನಕ್ಕೆ ಶಿಫಾರಸಾಗಿರುವ ಪಟ್ಟಿಯಲ್ಲಿ ಆರ್ಚರ್ ಅತನು ದಾಸ್, ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್, ಕ್ರಿಕೆಟರ್ ದೀಪಕ್ ಹೂಡಾ ಮತ್ತು ಟೆನಿಸ್ ಆಟಗಾರ ದಿವಿಜ್ ಶರಣ್ ಹೆಸರುಗಳು ಸೇರಿವೆ .
ಒಲಿಂಪಿಕ್ ಕಂಚಿನ ಪದಕ ವಿಜೇತ ರಸ್ಲರ್ ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲ್ಪಡಲಿದ್ದಾರೆ. ಆದರೆ ಅಂತಿಮ ನಿರ್ಧಾರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಅವಲಂಬಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss