Monday, July 4, 2022

Latest Posts

ಪ್ರತಿ ಜಿಲ್ಲೆಗಳಲ್ಲಿಯೂ ಪಿ.ಓ.ಎಸ್. ಉಪಕರಣ ಕಡ್ಡಾಯ: ಅಧಿಕಾರಿಗಳಿಗೆ ಸಚಿವ ಬಿ.ಸಿ.ಪಾಟೀಲ್ ಸೂಚನೆ

ಮೈಸೂರು:  ಕೃಷಿ ಇಲಾಖೆ ಕೇಂದ್ರ ಕಚೇರಿಯಿಂದ ರಸಗೊಬ್ಬರವನ್ನು ಪಡೆಯಲು ಪ್ರತಿಯೊಂದು ಜಿಲ್ಲೆಯಲ್ಲೂ ಪಿ.ಓ.ಎಸ್ ಉಪಕರಣವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಭಾಗೀಯ ಮಟ್ಟದ ಬೆಳೆ ಸಮೀಕ್ಷೆ ಕಾರ್ಯ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಅವರು ಹೇಳಿದರು.
ಮೈಸೂರು ವಿಭಾಗೀಯ ಮಟ್ಟದಲ್ಲಿ ಬರುವ 8 ಜಿಲ್ಲೆಗಳಲ್ಲಿನ ಮಳೆ-ಬೆಳೆ ಪರಿಸ್ಥಿತಿ, ಬಿತ್ತನೆ ಬೀಜ ವಿತರಣೆ, ರಸಗೊಬ್ಬರ ಸರಬರಾಜು, ಬೆಳೆ ಹಾನಿ ಹಾಗೂ ಬೆಳೆ ಸಮೀಕ್ಷೆಯ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ವರ್ಷ ಬೆಳೆ ಸಮೀಕ್ಷೆಯನ್ನು ರೈತರೆ ಮಾಡುತ್ತಿರುವುದು ಸಂತಸದ ವಿಷಯ. 23 ದಿನಗಳಲ್ಲಿ ಒಟ್ಟು 72 ಲಕ್ಷ ರೈತರು ತಮ್ಮ ಬೆಳೆÀಯನ್ನು ತಾವೇ ಸಮೀಕ್ಷೆ ನಡೆಸಿ ಫೆÇೀಟೋ ಅಪ್‍ಲೋಡ್ ಮಾಡಿದ್ದಾರೆ. 1.40 ಲಕ್ಷ ಬೆಳೆ ಸಮೀಕ್ಷೆಯು ಅಪ್‍ಲೋಡ್ ಆಗಬೇಕಿದೆ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿಯ ಬೆಳೆ ಸಮೀಕ್ಷೆ ಆಗದಿರುವುದು ಬೇಸರ ತಂದಿದೆ ಎಂದರು.
ಚಾಮರಾಜನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ 2020-21 ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಐದು ತಾಲ್ಲೂಕನ್ನು ಒಳಗೊಂಡು ಜಿಲ್ಲೆಯಲ್ಲಿ ಒಟ್ಟು 81,061 ರಷ್ಟು ಜಮೀನುಗಳನ್ನು ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಗೆ 5,700 ಮೆಟ್ರಿಕ್ ಟನ್‍ನಷ್ಟು ರಸಗೊಬ್ಬರದ ಕೊರತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು ಪಿ.ಓ.ಎಸ್ ಅನ್ನು ಕ್ಲಿಯರ್ ಮಾಡಿದ್ದರೆ ಮಾತ್ರ ರಸಗೊಬ್ಬರ ನೀಡಲು ಸಾಧ್ಯ ಹಾಗೂ ಪಿ.ಓ.ಎಸ್ ಅನ್ನು ಅಪ್‍ಲೋಡ್ ಮಾಡಿ ನಂತರ ಇದರ ಬಗ್ಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಕೊಳ್ಳೇಗಾಲದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬೆಳೆ ಸಮೀಕ್ಷೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು ಇದಕ್ಕೆ ಕೃಷಿ ಕೇಂದ್ರ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ ಅವರು ರೆವಿನ್ಯೂ ಸಿಬ್ಬಂದಿಗಳು ಹಾಗೂ ತಹಶೀಲ್ದಾರ್ ಅವರ ಸಲಹೆಗಳನ್ನು ಪಡೆದುಕೊಂಡು ಬೆಳೆ ಸಮೀಕ್ಷೆ ನಡೆಸಿ ಎಂದು ಸಲಹೆ ನೀಡಿದರು.
ಮೈಸೂರು ಕೃಷಿ ಇಲಾಖೆಯ ಜಿಂಟಿ ನಿರ್ದೇಶಕರಾದ ಮಹಂತೇಶಪ್ಪ ಅವರು ಇದುವರೆಗೂ 3,41,958 ರಷ್ಟು ಸಮೀಕ್ಷೆ ನಡೆಸಿ ಅಪ್‍ಲೋಡ್ ಮಾಡಲಾಗಿದೆ. ಮುಂದಿನ ತಿಂಗಳಿನಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತಿದೆ ಇದಕ್ಕೆ 5,650 ಹೆಕ್ಟೆರ್ ಯೂರಿಯ ರಸಗೊಬ್ಬರ ಅವಶ್ಯಕತೆ ಇದೆ. 13,999 ರಷ್ಟು ಹಾಗೂ ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲೂಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಸುಮಾರು 871 ಹೆಕ್ಟೆರ್‍ನಷ್ಟು ಬೆಳೆಗಳು ನಾಶಗೊಂಡಿವೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಯು ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಇನ್ನೂ ಹತ್ತು ದಿನಗಳಲ್ಲಿ ಬೆಳೆ ಸಮೀಕ್ಷೆಯನ್ನು ಮುಗಿಸಬೇಕು ಎಂದು ಸಚಿವರು ಹೇಳಿದರು.
ಇದೇವೇಳೆ ಕೇಂದ್ರ ಕೃಷಿ ನಿರ್ದೇಶಕರಾದ ಶ್ರೀನಿವಾಸ, ಅಪರ ಕೃಷಿ ನಿರ್ದೇಶಕರಾದ ಡಾ.ಅಂಥೋಣಿ, ಅಪರ ಕೃಷಿ ನಿರ್ದೇಶಕರಾದ ವೆಂಕಟರಮಣ್ ರೆಡ್ಡಿ ಹಾಗೂ 8 ಜಿಲ್ಲೆಗಳ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss