Saturday, July 2, 2022

Latest Posts

ಪ್ರತಿ ತಿಂಗಳು ಬಿಲಿಯನೇರ್ ಗಳ ಹೆಚ್ಚಳ; ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭಾರತ!

ಮುಂಬೈ: ಭಾರತದಲ್ಲಿ 2019ರಲ್ಲಿ ಪ್ರತೀ ತಿಂಗಳಿಗೆ 3 ಬಿಲಿಯನೇರ್ ಗಳ ಹೆಚ್ಚುತ್ತಿದ್ದು, ಅತಿಹೆಚ್ಚು ಬಿಲಿಯನೇರ್ ಗಳನ್ನು ಹೊಂದಿದ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.

799 ಬಿಲಿಯನೇರ್ ಗಳನ್ನು ಇರುವ ಚೀನಾ ಹಾಗೂ 626 ಬಿಲಿಯನೇರ್ ಗಳನ್ನು ಹೊಂದಿರುವ ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ.

ಚೀನಾದಲ್ಲಿ ಬಿಲಿಯನೇರ್ ಗಳ ಸಂಖ್ಯೆ ವಾರಕ್ಕೆ ಮೂರರಂತೆ ಏರುತ್ತಿದ್ದು, ಜಾಗತಿಕವಾಗಿ 2019ರಲ್ಲಿ 480 ಬಿಲಿಯನೇರ್ ಗಳು ಹೆಚ್ಚಾಗಿದ್ದಾರೆ. ಅಂದರೆ ದಿನಕ್ಕೆ ಒಬ್ಬರಿಗಿಂತ ಹೆಚ್ಚು.

ಭಾರತದಲ್ಲಿ ಅತೀ ಹೆಚ್ಚು ಬಿಲಿಯನೇರ್ ಗಳು ಮುಂಬೈನಲ್ಲಿದ್ದಾರೆ. ವಿಶ್ವದಲ್ಲಿ ಮುಂಬೈ 9ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 17 ಬಿಲಿಯನೇರ್ ಗಳು ಇದ್ದಾರೆ. 67 ಬಿಲಿಯನ್ ಡಾಲರ್ ಹೊಂದಿರುವ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss