ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹವಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಪ್ರತಿ ದೇಶವು “ಹವಮಾನ ತುರ್ತು ಪರಿಸ್ಥಿತಿ” ಘೋಷಣೆ ಮಾಡಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರ್ರಸ್ ಕರೆ ನೀಡಿದ್ದಾರೆ.
ಪ್ಯಾರಿಸ್ ಪರಿಸರ ಸಮ್ಮೇಳನ 5ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗುಟೆರ್ರಸ್ ಶನಿವಾರ “ಹವಮಾನ ತುರ್ತು ಪರಿಸ್ಥಿತಿ” ಘೋಷಣೆ ಮಾಡುವಂತೆ ಕರೆ ನೀಡಿದ್ದಾರೆ.
ಗಾಸ್ಕೊದಲ್ಲಿ 2021ರಲ್ಲಿ ಮುಂದಿನ ಸಭೆ ನಡೆಯಲಿದ್ದು, ಜಗತ್ತಿನಲ್ಲಿ ಹವಾಮಾನ ವೈಪರಿತ್ಯ ಮಿತಿಮೀರಿದೆ. ಯಾವುದಾದರು ದೇಶ “ನಾವು ಹವಮಾನ ವೈಪರಿತ್ಯ ಎದುರಿಸುತ್ತಿಲ್ಲ ಎಂದು ಹೇಳಲು ಸಾಧ್ಯವೇ”? ಹಾಗಾಗಿ ಪ್ರತಿ ದೇಶ ” ಹವಮಾನ ತುರ್ತು ಪರಿಸ್ಥಿತಿ” ಘೋಷಿಸುವಂತಹ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.