Wednesday, July 6, 2022

Latest Posts

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಡಿಜಿಟಲ್ ವೇದಿಕೆಯಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗೆ ಚಾಲನೆ ನೀಡಿದ್ದು, ಜೊತೆಗೆ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ ಆಪ್ ಉದ್ಘಾಟಿಸಿದ್ದಾರೆ.
ಈ ಯೋಜನೆಯಿಂದ ಸುಮಾರು ೫೫ ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದ್ದು, ಐದು ವರ್ಷದಲ್ಲಿ ೭೦ ಲಕ್ಷ ಟನ್ ಮೀನುಗಾರಿಕೆ ಉತ್ಪಾದನೆ ಸಾಧ್ಯವಾಗಲಿದೆ. ಮೀನು ರಫ್ತು ದ್ವಿಗುಣವಾಗಲಿದೆ ಎಂದಿದ್ದಾರೆ. ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟ್‌ಲ್ ಇ- ಗೋಪಾಲಾ ಆಪ್ ಜೊತೆಗೆ ಮೀನುಗಾರಿಕೆ ಹಾಗೂ ಪಶುಸಂಗೋಪನಾ ಕ್ಷೇತ್ರಗಳಲ್ಲಿ ಇನ್ನೂ ಅನೇಕ ಉಪಕ್ರಮಗಳನ್ನು ಪ್ರಧಾನಿ ಆರಂಭಿಸಿದರು.
ಇ ಗೋಪಾಲ ಆಪ್‌ನಲ್ಲಿಕೃತಕ ಗರ್ಭಧಾರಣೆ, ಪ್ರಾಣಿಗಳ ಪ್ರಥಮ ಚಿಕಿತ್ಸೆ, ವ್ಯಾಕ್ಸಿನೇಶನ್, ಪೋಷಣೆಗೆ ಬೇಕಾದ ಮಾಹಿತಿ ಜೊತೆಗೆ ಇನ್ನೂ ಹಲವು ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ದೊರೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss