Sunday, August 14, 2022

Latest Posts

ಪ್ರಧಾನಿ, ಕೇಂದ್ರ ವಿರುದ್ಧ ಸತತ ಟೀಕೆಗಳಿಂದ ಜನರಲ್ಲಿ ರೇಜಿಗೆ, ಈಗ ಪಕ್ಷ ನಾಯಕರ ಬಗೆಗೇ ಟೀಕೆ: ರಾಹುಲ್ ಅಪಕ್ವತೆ ಬಯಲಿಗೆ

ದಿಲ್ಲಿ: ನಮಗೆ ಸಂಪೂರ್ಣ ಕ್ರಿಯಾಶೀಲ ಮತ್ತು ದಕ್ಷ ನಾಯಕತ್ವ ಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ನ್ನು ಆಗ್ರಹಿಸಿರುವ ಗುಂಪಿನ ನೇತೃತ್ವ ವಹಿಸಿದ್ದ , ಪಕ್ಷದ ಪ್ರಮುಖ ನಾಯಕ ,ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ನಿಲುವಿಗೆ ಕಾಂಗ್ರೆಸ್ ಪಾಳಯದಲ್ಲೇ ಅಚ್ಚರಿ ವ್ಯಕ್ತವಾಗಿದೆ.
ನಾಯಕತ್ವ ಬದಲಾವಣೆ ಕೋರಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರಕ್ಕೆ ೨೩ ಮಂದಿ ಕಾಂಗ್ರೆಸಿಗರು ಸಹಿ ಹಾಕಿದ್ದು, ಗುಲಾಂ ನಬಿ ಆಜಾದ್ , ಕಪಿಲ್ ಸಿಬಲ್‌ರಂತಹವರೇ ಈ ಗುಂಪಿನ ಭಾಗವಾಗಲು ತೀರ್ಮಾನಿಸಿದ್ದರಿಂದ ಈ ವಿಚಾರಕ್ಕೊಂದು ಬಲ ಬಂತು. ಅಲ್ಲದಿದ್ದಲ್ಲಿ ಈ ವಿಚಾರ ಸುದ್ದಿಯಿಲ್ಲದೆ ಮೂಲೆಗುಂಪಾಗಿ ಬಿಡುತ್ತಿತ್ತು. ಪಕ್ಷದೊಳಗಿನ ಕೆಲವು ಹಿರಿಯ -ಕಿರಿಯ ನಾಯಕರೆನ್ನುವಂತೆ , ಗುಲಾಂ ನಬಿ ಪಕ್ಷದಲ್ಲಿ ಬಂಡಾಯ ಇತ್ಯಾದಿಗಳನ್ನೆಲ್ಲ ಮಾಡುವವರಲ್ಲ, ಹೀಗಿದ್ದೂ ಈ ಬಾರಿ ಸೋನಿಯಾಗೆ ಪತ್ರ ಬರೆಯುವಲ್ಲಿ ಅವರೇಕೆ ಮುಂದಾದರು ಎಂಬ ಪ್ರಶ್ನೆ ಕಾಂಗ್ರೆಸ್ ನಾಯಕರನ್ನೇ ಕಾಡುತ್ತಿದೆ.
ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿ ರದ್ದುಪಡಿಸಿ, ಜಮ್ಮು -ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ತೀರ್ಮಾನಕ್ಕೆ ಕಾಂಗ್ರೆಸ್ ಪ್ರಬಲ ಪ್ರತಿರೋಧ ವ್ಯಕ್ತಪಡಿಸುವುದೆಂದು ಗುಲಾಂ ನಬಿ ನಂಬಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ನಡೆ ಬಗ್ಗೆ ಈ ನಾಯಕನಿಗೆ ಬೇಸರವಿದೆ ಎನ್ನಲಾಗಿದೆ.
ಮೇಲ್ಮನೆಯಲ್ಲಿ ಮಂಡನೆಯಾಗುವ ಅಥವಾ ಮಂಜೂರಾಗುವ ಯಾವುದೇ ತೀಕ್ಷ್ಣ ಆದೇಶವನ್ನು ಅಷ್ಟೇ ತೀಕ್ಷ್ಣವಾಗಿ ಪ್ರಶ್ನಿಸುವ ಗುಲಾಂ ನಬಿ ಅವರ ರಾಜ್ಯಸಭಾ ಸದಸ್ಯತನವು ಮುಂದಿನ ವರ್ಷ ಫೆಬ್ರವರಿಗೆ ಮುಗಿಯಲಿದೆ. ಕಾಂಗ್ರೆಸ್‌ನ ಇತರ ಹಲವು ಹಿರಿಯ ನಾಯಕರಂತೆ, ಗುಲಾಂ ನಬಿ ಅವರಿಗೂ ರಾಹುಲ್ ಗಾಂಧಿ ಯ ಅಪ್ರಬುದ್ಧ ವರ್ತನೆಗಳು, ವಿಚಿತ್ರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನವಿದೆ.
೧೯೮೦ರಿಂದಲೇ ಕಾಂಗ್ರೆಸ್‌ನ ಸುರಕ್ಷಿತ ಕೋಟೆಗಳಾದ ವಾಶಿಮ್ ಮತ್ತಿತರ ಪ್ರದೇಶಗಳಿಂದ ಅನಾಯಾಸವಾಗಿ ಗೆದ್ದು ಸಂಸತ್ತಿಗೆ ಆಯ್ಕೆಯಾಗಿರುವ ಗುಲಾಂ ನಬಿ ಆಜಾದ್, ಸೋಮವಾರದ ಕಾರ್ಯಕಾರಿ ಸಭೆಯಲ್ಲಿ ಮಾತ್ರ ತುಂಬು ಗರಂ ಆಗಿದ್ದರು. ಪಕ್ಷದ ಒಂದು ಬಣವು, ಸೋನಿಯಾ ಅವರ ಆರೋಗ್ಯ ಕೆಟ್ಟಿರುವ ವಿಷಯ ಗೊತ್ತಿದ್ದೂ ಆಕೆಗೆ ಬಂಡಾಯದ ಪತ್ರ ಹಸ್ತಾಂತರಿಸಿದ್ದು ತಪ್ಪೆಂದು ಭಾವನಾತ್ಮಕ ಅಸ್ತ್ರವನ್ನು ಪ್ರಯೋಗಿಸಿ ಆರೋಪ ಮಾಡಿದಾಗ ಆಜಾದ್ ಗಂಭೀರರಾಗಿದ್ದರು.
ಇದಕ್ಕಿಂತಲೂ ರಾಹುಲ್ ಗಾಂಧಿ , ಈ ರೀತಿ ಪತ್ರ ಬರೆದ ಕಾಂಗ್ರೆಸ್ ನಾಯಕರು ಬಿಜೆಪಿ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ, ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದೆಲ್ಲ ಆರೋಪಿಸಿದಾಗಲಂತೂ ಕಾಂಗ್ರೆಸ್‌ನ ಹಿರಿಯ ನಾಯಕ ವರ್ಗವೇ ಆಘಾತಕ್ಕೀಡಾಗಿತ್ತು.
ನಾವು ಅಂತಹವರಲ್ಲ, ಬಿಜೆಪಿ ಅಥವಾ ಮೋದಿಯವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಿದವರಲ್ಲ, ಒಪ್ಪಿದವರೂ ಅಲ್ಲ. ಹೀಗಿದ್ದರೂ ನಮ್ಮ ಮೇಲೆ ರಾಹುಲ್ ಮಾಡಿದ ಆರೋಪ ಈ ನಾಯಕರನ್ನು ಆಕ್ರೋಶಿತರನ್ನಾಗಿಸಿತ್ತು. ಅಲ್ಲದೆ ತೀವ್ರ ಹತಾಶೆಗೂ ಈಡು ಮಾಡಿತ್ತು.
ಇದಕ್ಕಾಗಿಯೇ ಆಜಾದ್ , ಕಪಿಲ್ ಸಿಬಲ್ , ವೀರಪ್ಪ ಮೊಯ್ಲಿ ಪ್ರತ್ಯೇಕವಾಗಿ ಕಾಂಗ್ರೆಸ್ ವರಿಷ್ಠರ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಆಜಾದ್ ರಾಹುಲ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಳಿಕ ಸೋನಿಯಾ ಆಪ್ತರಿಂದ ಅವರನ್ನು ಸಮಾಧಾನಿಸುವ ತೆರೆಮರೆಯ ಯತ್ನ ನಡೆದು ಬಳಿಕ ಸೋನಿಯಾ, ರಾಹುಲ್ ಕೂಡಾ ಮಾತನಾಡಿಸುವಂತೆ ಮಾಡಿತ್ತು.
ಬಳಿಕ ಕಪಿಲ್ ಸಿಬಲ್ ಅವರು ಕೂಡಾ ಇಂತಹುದೇ ಅಸಮಾಧಾನದೊಂದಿಗೆ ಟ್ವೀಟ್ ಮಾಡಿ ಬಳಿಕ ಹೈಕಮಾಂಡ್ ಕಡೆಯಿಂದ ಬಂದ ಒತ್ತಡ-ಸಮಜಾಯಿಷಿಗಳ ಬಳಿಕ ಈ ಟ್ವೀಟನ್ನು ಹಿಂಪಡೆದುಕೊಂಡಿದ್ದರು. ಇನ್ನು ಈ ಹಿಂದಿನಿಂದಲೂ ಗಾಂ ಕುಟುಂಬ ನಿಷ್ಠರಾಗಿಯೇ ಇದ್ದ ವೀರಪ್ಪ ಮೊಯ್ಲಿ ಅವರಂತೂ ಎಂದಿನಂತೆ, ಕಣ್ಣೀರು ಹಾಕಿ ಭಾವನಾತ್ಮಕ ಹೇಳಿಕೆಗಳನ್ನು ನೀಡಿ ತಾನು ಕನಸು ಮನಸಿನಲ್ಲೂ ಮೋದಿ ಅವರನ್ನು ಒಪ್ಪಿಲ್ಲ. ಸಾಯುವವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದೆಲ್ಲ ಪ್ರತಿಕ್ರಿಯಿಸಿದ್ದರು.
ಅಂತೂ, ಚೀನೀ ಆಕ್ರಮಣ, ಕೋವಿಡ್ ಬಿಕ್ಕಟ್ಟು, ಪಾಕಿಸ್ಥಾನಿ ಕುತ್ಸಿತ ನಿಲುವುಗಳ ಸಂದರ್ಭಗಳಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ಸರಕಾರದ ವಿರುದ್ಧ ಕುತ್ಸಿತ ಟೀಕೆಗಳಿಂದ ವೈರಿ ದೇಶಗಳಿಗೆ ನೆರವಾಗುತ್ತಿದ್ದ ರಾಹುಲ್ ಗಾಂ ಇದೀಗ ತನ್ನ ಬಾಲಿಶ ನಡವಳಿಕೆಗಳಿಂದ ಕಾಂಗ್ರೆಸ್‌ನ ಪ್ರಮುಖ ನಾಯಕರಿಗೂ ಪೇಚು ತರುತ್ತಿರುವುದು ಕಾಂಗ್ರೆಸ್‌ನ ಇತ್ತೀಚಿನ ನಾಯಕತ್ವ ವಿವಾದ ಚರ್ಚೆಗಳಿಂದ ಹೊರಬಂದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss