ಕೊಪ್ಪಳ: ಡಿ.ಕೆ.ಸುರೇಶ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಕೊಳ್ಳಲಿ ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಡಿ.ಕೆ.ಸುರೇಶ ಅವರಿಗಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ಕೊಪ್ಪಳ ನಗರದಲಿ ಶುಕ್ರವಾರ ಮೋದಿಯವರಿಗೆ ತಾಕತ್ತಿದ್ದರೇ ಚೀನಾ ವಸ್ತುಗಳನ್ನು ಬ್ಯಾನ್ ಮಾಡಲಿ ಎಂಬ ಡಿ.ಕೆ.ಸುರೇಶ ಹೇಳಿಕೆಗೆ ಉತ್ತಿರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ ತಮ್ಮ ಕ್ಷೇತ್ರದ ಬಗ್ಗೆ ಮಾತ್ರ ಮಾತನಾಡಲಿ. ಪ್ರಧಾನಿಮಂತ್ರಿಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಕಳೆದ ಅರವತ್ತು ದಿನಗಳಲ್ಲಿ ಮೋದಿ ತಾಕತ್ತು ಏನೆಂಬುದು ಇಡೀ ವಿಶ್ವಕ್ಕೆ ಗೊತ್ತಿದೆ. ಚೀನಾದ ವಸ್ತುಗಳ ಬಳಕೆ ನಿಷೇಧಕ್ಕೆ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮೋದಿಯವರು ಖಂಡಿತವಾಗಿ ತೆಗೆದುಕೊಳ್ಳುತ್ತಾರೆ ಎಂದರು.
ಎಚ್.ವಿಶ್ವನಾಥ ಹೊರತುಪಡಿಸಿ ಎಂ.ಟಿ.ಬಿ ನಾಗರಾಜ ಮತ್ತು ಆರ್. ಶಂಕರ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಲಾಗಿದೆ. ಕೊನೆ ಕ್ಷಣದಲ್ಲಿ ವಿಶ್ವನಾಥಗೆ ಟಿಕೆಟ್ ಕೈತಪ್ಪಿದೆ. ಹೀಗಾಗಿ ಮುಂದಿನ ದಿನದಲ್ಲಿ ಸಿಎಂ ವಿಶ್ವನಾಥ ಅವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ವಿಶ್ವನಾಥ ಅವರು ಕೂಡ ಸಮ್ಮತಿಸಿದ್ದಾರೆ. ಯಾರಿಗೂ ಅನ್ಯಾಯ ಹಾಗೂ ಮೋಸ ಮಾಡುವ ದುರುದ್ದೇಶ ಸಿಎಂಗಿಲ್ಲ ಎಂದರು.
ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ಗಳಲ್ಲಿ ರೈತರಿಗೆ ಹೊಸ ಸಾಲ ವಿತರಣೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆರ್ಡಿಸಿಸಿ ಬ್ಯಾಂಕ್ ವಿಂಗಡಣೆ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಈಗಾಗಲೇ ಆರ್ಡಿಸಿಸಿ ಬ್ಯಾಂಕ್ ವಿಂಗಡಣೆ ಸಂಬಂಧ ಎರಡು ಸಭೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೂಲಂಕುಷವಾಗಿ ಚರ್ಚಿಸಿ ಆರ್ಡಿಸಿಸಿ ಬ್ಯಾಂಕ್ನ್ನು ವಿಂಗಡಿಸಲಾಗುವುದು ಎಂದರು.