ನವದೆಹಲಿ: ಕೋರೋನಾ ವೈರಸ್ ಸಂಕಷ್ಟ ಕಾಲದಲ್ಲಿರುವ ದೇಶ ನಿವಾಸಿಗಳು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಜನಪ್ರೀಯ ಕಾರ್ಯಕ್ರಮ ‘ಮನ್ ಕೀ ಬಾತ್’ ಆಲಿಸಲು ಕಾತರರಾಗಿದ್ದಾರೆ.
ಇಂದಿನ ಪ್ರಧಾನಿ ಭಾಷಣದಲ್ಲಿ ಕೋರೋನಾ ವೈರಸ್ ಬಗ್ಗೆ ಸರಕಾರದ ಮುಂದಿನ ನಡೆ, ಹೋರಾಟದ ಪ್ರಗತಿ ಬಗ್ಗೆ ಮಾತನಾಡುವ ಸಾಧ್ಯತೆ ಇದ್ದು, ಲಾಕ್ಡೌನ್ ಹಿಂಪಡೆಯುವ ಅಥವಾ ಮುಂದುವರಿಸುವ ಬಗ್ಗೆಯೂ ಮಾತನಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇಂದಿನ ಮನ್ ಕೀ ಬಾತ್ ನತ್ತ ನೆಟ್ಟಿದೆ.
ಜನರನ್ನು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು…
ದೇಶದಲ್ಲಿ ಲಾಕ್ ಡೌನ್ ವಿಧಿಸಿದಕ್ಕಾಗಿ ಕಳೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜನರನ್ನು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜೊತೆಗೆ ಲಾಕ್ ಡೌನ್ ನಿಂದಾಗುವ ಒಳಿತುಗಳ ಕುರಿತು ಮನವರಿಕೆ ಮಾಡಿ ಕೊಟ್ಟಿದ್ದರು. ಇಂದು ಕೋರೋನಾ ವೈರಸ್ ಕುರಿತಾಗಿ ಮಹತ್ವದ ಅಂಶಗಳನ್ನು ಭಾಷಣದಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.
ಮನ್ ಕೀ ಬಾತ್ ಕಾರ್ಯಕ್ರಮ ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್ಸೈಟ್, ನ್ಯೂಸ್ ಆನ್ ಎಐಆರ್ ಆ್ಯಪ್ನಲ್ಲೂ ಪ್ರಸಾರವಾಗಲಿದೆ.