Friday, September 25, 2020
Friday, September 25, 2020

Latest Posts

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಪ್ರಧಾನಿ ಮೋದಿಯವರನ್ನು ಸುಳ್ಳುಗಾರ ಎನ್ನಲು ಹೋಗಿ ರಾಹುಲ್ ಸುಳ್ಳು ಬಯಲಿಗೆ!

sharing is caring...!

ಹೊಸದಿಲ್ಲಿ: ಭಾರತ – ಚೀನಾ ಗಡಿ ವಿವಾದವನ್ನೇ ತನ್ನ ರಾಜಕೀಯಕ್ಕೆ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ತಾನೇ ಎಷ್ಟು ದೊಡ್ಡ ಸುಳ್ಳುಗಾರ ಎಂಬುದನ್ನು ಬಯಲುಮಾಡಿಕೊಂಡು ನೆಟ್ಟಿಗರಿಂದ ತೀವ್ರ ತರಾಟೆಗೆ ತುತ್ತಾಗಿದ್ದಾರೆ. ಶುಕ್ರವಾರ ರಾಹುಲ್ ಗಾಂಧಿ ವಿಡಿಯೋ ಒಂದನ್ನು ಟ್ವೀಟ್ ಮಾಡಿ ನಮ್ಮ ಭೂಭಾಗವನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂಬ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೋ ಅಥವಾ ಲಡಾಖಿ ಜನರೋ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಆದರೆ ಅದರಲ್ಲಿ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿದ ವ್ಯಕ್ತಿಗಳು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಅದರಲ್ಲೂ ಕೆಲವರು ಅನ್ಯ ರಾಜ್ಯದವರು ಎಂಬುದನ್ನೂ ನೆಟ್ಟಿಗರು ಬಯಲು ಮಾಡಿ ರಾಹುಲ್‌ಗೆ ತೀವ್ರ ಮುಖಭಂಗವುಂಟು ಮಾಡಿದ್ದಾರೆ.
ತನ್ನ ಟ್ವೀಟ್‌ಗೆ ರಾಹುಲ್ ಬಳಸಿದ್ದ ವಿಡಿಯೋದಲ್ಲಿರುವವರು ಲಡಾಕಿಗಳು ಅಲ್ಲ, ಕಾಂಗ್ರೆಸ್ ಕಾರ್ಯಕರ್ತರು ಎಂದು ನೆಟ್ಟಿಗರು ಆ ವ್ಯಕ್ತಿಗಳ ಪರಿಚಯ ಸಮೇತವಾಗಿ ಬಯಲಿಗೆಳೆದಿದ್ದಾರೆ. ಅಲ್ಲಿರುವವರ ವಿವರಗಳನ್ನು ನೀಡಿ ರಾಹುಲ್ ಗಾಂ ದೇಶದ ಸುರಕ್ಷೆಯಂತಹ ವಿಷಯದಲ್ಲೂ ಎಂತಹ ಕೇಳು ರಾಜಕೀಯದಲ್ಲಿ ತೊಡಗಿದ್ದಾರೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಅಸಂಬದ್ಧ ಹೇಳಿಕೆ ನೀಡುವ ರಾಹುಲ್ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕುಟುಕಿದ್ದಾರೆ.
ಚೀನಾ ಆಕ್ರಮಣ ಯತ್ನಕ್ಕೆ ಸಂಬಂಸಿ ಚೀನಾವನ್ನು ಖಂಡಿಸದೆ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಹುಲ್ ಆರೋಪಗಳ ಸುರಿಮಳೆಗೈಯುತ್ತಿರುವುದು ವ್ಯಾಪಕ ಚರ್ಚೆಗೆ ತುತ್ತಾಗಿರುವಾಗಲೇ, ಶುಕ್ರವಾರ ಪ್ರಧಾನಿ ಲಡಾಖ್‌ಗೆ ಭೇಟಿ ನೀಡಿದಾಗ ರಾಹುಲ್ ಮತ್ತೊಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಲಡಾಖಿಗಳು , ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎನ್ನುತ್ತಿದ್ದಾರೆ.ಆದರೆ ಪ್ರಧಾನಿ ಮೋದಿ ಮಾತ್ರ ಯಾರೂ ನಮ್ಮ ಭೂಮಿಯನ್ನು ಕಬಳಿಸಿಕೊಂಡಿಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ಯಾರಾದರೊಬ್ಬರು ಸುಳ್ಳು ಹೇಳುತ್ತಿರಬೇಕಲ್ಲ ಎಂದು ರಾಹುಲ್ ವ್ಯಂಗ್ಯವಾಗಿ ಹೇಳಿದ್ದರು.
ಆದರೆ, ಇದೀಗ ಆ ವಿಡಿಯೋದ ಅಸಲಿಯತ್ತೇ ಬಯಲಿಗೆ ಬಂದಿದೆ.ಅದರಲ್ಲಿ ಮಾತನಾಡಿರುವವರೆಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಂಬುದನ್ನು ನೆಟ್ಟಿಗರು ಟ್ವೀಟ್‌ನಲ್ಲಿಯೇ ದಾಖಲೆಗಳೊಂದಿಗೆ ಬಯಲಿಗೆಳೆದಿದ್ದಾರೆ. ವಿಪರ್ಯಾಸವೆಂದರೆ ಹೀಗೆ ಹೇಳಿದವರಲ್ಲಿ ಕೆಲವರು ಲಡಾಖ್‌ಗೆ ಸಂಬಂಧಪಡದವರೇ ಇರುವುದು ಇನ್ನಷ್ಟು ಆಘಾತ ಮೂಡಿಸಿದೆ.ಇದು ಟ್ರೋಲಿಗರಿಗೆ ಆಹಾರವಾಗಿದೆ. ಕಾಂಗ್ರೆಸ್ ನಾಯಕನ ವಿರುದ್ಧ ಕಿಡಿಕಾರಿದ್ದಾರೆ.
ಪೊಲಿಟಿಕಲ್ ಕೀಡಾ ಎಂಬ ಟ್ವಿಟರ್ ಖಾತೆಯಲ್ಲಿ ರಾಹುಲ್ ವಿಡಿಯೋದಲ್ಲಿ ಬಂದಿರುವವರ ವಿವರಗಳನ್ನು ನೀಡಿ ವಿಡಿಯೋದ ಉದ್ದೇಶವನ್ನು ಬಯಲಿಗೆಳೆಯಲಾಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ೫ನೇ ವ್ಯಕ್ತಿಸಚಿನ್ ಮಿರುಪಾ, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿ. ಆದರೆ ಈತ ಲಡಾಖಿಯಾಗಿರದೆ ಹಿಮಾಚಲ ಪ್ರದೇಶಕ್ಕೆ ಸೇರಿದಾತ.ಹಾಗೆಯೇ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲೆತ್ನಿಸಿದ ತಂಡ್‌ಪ್ ನುಬು ಚೀತಾ ಲೇಹ್ ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ . ಇನ್ನೊಬ್ಬ ಡೋರ್ಜಾ ಗೈಲ್ಟಸನ್ ಲೇಹ್ ಜಿಲ್ಲಾ ಯುವ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ .ನಂಗ್ಯಾಲ್ ದರ್ಬಕ್ ಎಂಬ ವ್ಯಕ್ತಿಯನ್ನು ಪತ್ರಕರ್ತೆ ಬರ್ಕಾ ದತ್ ಸಂದರ್ಶನ ಮಾಡಿದ್ದು, ಆ ವ್ಯಕ್ತಿ ಕಾಂಗ್ರೆಸ್ ಮಾಜಿ ಕೌನ್ಸಿಲರ್ .
ಈಗ ಸುಳ್ಳು ಹೇಳುತ್ತಿರುವವರು ಯಾರು ಎಂಬುದಾಗಿ ರಾಹುಲ್‌ರನ್ನು ಪ್ರಶ್ನಿಸಿದ್ದಾರೆ ನೆಟ್ಟಿಗರು. ದೇಶದ ಸುರಕ್ಷತೆಯಂತಹ ವಿಷಯದಲ್ಲೂ ಕಾಂಗ್ರೆಸ್ ನಾಯಕ ನಡೆಸುತ್ತಿರುವ ಇಂತಹ ಹೀನ ರಾಜಕೀಯವನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡುತ್ತಾ ಹೋಗುವ ರಾಹುಲ್ ಗಾಂ ತನ್ನ ಸುಳ್ಳು ಬಯಲಿಗೆ ಬಂದಾಗ ಯಾವುದೇ ಉತ್ತರ ನೀಡದೆ ಆರೋಪ ಮುಂದುವರಿಸುತ್ತಾ ಹೋಗುವುದು ಸಾಮಾನ್ಯವೆನಿಸಿದೆ.

Latest Posts

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

Don't Miss

ಬೇಗ ಗುಣಮುಖರಾಗಿ ಎಸ್‌ಪಿಬಿ ಸರ್: ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್

ನವದೆಹಲಿ: ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಎಸ್‌ಪಿಬಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ. ಈ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...
error: Content is protected !!