Tuesday, August 16, 2022

Latest Posts

ಪ್ರಧಾನಿ ಮೋದಿಯವರಿಂದ ಕೇಂದ್ರ ಕೃಷಿ ವಿಶ್ವ ವಿದ್ಯಾಲಯದ ಕಟ್ಟಡಗಳ ಉದ್ಘಾಟನೆ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿನ ರಾಣಿ ಜಾನ್ಸಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವ ವಿದ್ಯಾಲಯದ ಕಾಲೇಜನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಇಂದು ಮಧ್ಯಾಹ್ನ 12.30ಕ್ಕೆ ರಾಣಿ ಜಾನ್ಸಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವ ವಿದ್ಯಾಲಯ ಕಟ್ಟಡವನ್ನು ಉದ್ಘಾಟಿಸಲಾಗುತ್ತದೆ. ಇದು ಶಿಕ್ಷಣ ಮೂಲ ಸೌಕರ್ಯ ಮತ್ತು ಅತ್ಯಾಧುನಿಕ ಕೃಷಿ ಸಂಶೋಧನೆ ಮತ್ತು ರೈತರಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ವಿಶ್ವವಿದ್ಯಾಲಯವು 2014ರಿಂದ15ರಲ್ಲಿ ತನ್ನ ಮೊದಲ ಶೈಕ್ಷಣಿಕ ವರ್ಷ ಪ್ರಾರಂಭಿಸಿತ್ತು. ಭಾರತೀಯ ಹುಲ್ಲುಗಾವಲು, ಮೇವು ಸಂಶೋಧನೆ ಸೇರಿದಂತೆ ಅನೇಕ ಕೃಷಿ ಸಂಶೋಧನೆಯಲ್ಲಿ ನಿರತವಾಗಿತ್ತು.

ಇದು ಕೃಷಿ, ತೋಟಗಾರಿಕೆ ಮತ್ತು ಅರಣ್ಯಶಾಸ್ತ್ರದ ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣಗಳನ್ನು ನೀಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss