ಹೊಸದಿಗಂತ ಆನ್ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಲಸಿಕೆ ಬರುತ್ತಿದೆ. ಇದನ್ನು ಮೊದಲು ಪ್ರಧಾನಿ ಮೋದಿ ಅವರು ಪಡೆಯಬೇಕು. ಅವರ ನಂತರ ನಾವು ಪಡೆಯುತ್ತೇವೆ ಎಂದು ಲಾಲು ಪ್ರಸಾದ್ ಯಾದವ್ ಪುತ್ರ ಆರ್ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಒತ್ತಾಯಿಸಿದ್ದಾರೆ.
ಮೋದಿಯವರನ್ನು ನಾವು ಅನುಸರಿಸುತ್ತೇವೆ. ಮೊದಲು ಅವರು ಲಸಿಕೆ ಪಡೆದರೆ ನಾವೂ ಪಡೆಯುತ್ತೇವೆ. ಮುಂದಾಳತ್ವ ವಹಿಸಿ ಎಂದಿದ್ದಾರೆ.
ಕಾಂಗ್ರೆಸ್ ನ ಮನೀಶ್ ತಿವಾರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿ ಪಕ್ಷದ ಹಲವು ನಾಯಕರು ಕೊರೊನಾ ಲಸಿಕೆ ಕುರಿತು ಅಸಮ್ಮತಿ ಸೂಚಿಸಿದ್ದರು. ಲಸಿಕೆಯ ಸಾಮರ್ಥ್ಯ ಹಾಗೂ ಪರಿಣಾಮದ ಕುರಿತು ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಆರ್ ಜಿಡಿ ನಾಯಕ ತೇಜ್ ಪ್ರತಾಪ್ ಕೂಡ ಈ ಹೇಳಿಕೆ ನೀಡಿದ್ದಾರೆ.