Thursday, August 11, 2022

Latest Posts

ಪ್ರಧಾನಿ ಮೋದಿಯಿಂದ ‘ನೌಕಾಯಾನ ಸಚಿವಾಲಯ’ಕ್ಕೆ ಮರುನಾಮಕರಣ: ಏನು ಗೊತ್ತಾ ಹೊಸ ಹೆಸರು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನೌಕಾಯಾನ ಸಚಿವಾಲಯಕ್ಕೆ ‘ಬಂದರು, ನೌಕಾಯಾನ ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಮರುನಾಮಕರಣ ಮಾಡಿದ್ದಾರೆ.
ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೂರತ್‌ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ ಮಾರ್ಗ ಕಲ್ಪಿಸುವ ರೋ-ಪ್ಯಾಕ್ಸ್‌ ಹಡಗು ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ‘ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿಸುವಲ್ಲಿ ಸಮುದ್ರ ಪ್ರದೇಶಗಳು ಕೂಡ ಮಹತ್ವದ ಪಾತ್ರವಹಿಸಲಿದೆ. ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಡಲಾಗುತ್ತಿದ್ದು ನೌಕಾಯಾನ ಸಚಿವಾಲಯವನ್ನು ‘ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ’ ಎಂದು ಮರುನಾಮಕರಣ ಮಾಡಲಾಗುತ್ತಿದೆ ಮತ್ತು ಈ ಸಚಿವಾಲಯವನ್ನು ವಿಸ್ತರಿಸಲಾಗುತ್ತಿದೆ ಎಂದರು.
‘ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೌಕಾಯಾನ ಸಚಿವಾಲಯವು ಬಂದರು ಮತ್ತು ಜಲಮಾರ್ಗಗಳ ಬಗ್ಗೆಯೂ ಕಾಳಜಿ ವಹಿಸುತ್ತದೆ. ಭಾರತದಲ್ಲೂ ನೌಕಾಯಾನ ಸಚಿವಾಲಯವು ಬಂದರು ಮತ್ತು ಜಲಮಾರ್ಗ ಸಂಬಂಧಿತ ಹೆಚ್ಚಿನ ಕೆಲಸಗಳನ್ನ ಮಾಡುತ್ತದೆ. ಹಾಗಾಗಿ ಹೆಸರಿನಲ್ಲಿ ಸ್ಪಷ್ಟತೆ ಇದ್ದರೆ, ಕೆಲಸದಲ್ಲೂ ಸ್ಪಷ್ಟತೆ ಇರುತ್ತೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss