ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರ ಬಿಜೆಪಿ ಯುವಮೋರ್ಚಾ ವತಿಯಿಂದ ಶುಕ್ರವಾರ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಪಕ್ಷಿಗಳ ಫೋಟೊ ತೆಗೆಯುವ ದೃಶ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಸಂವಿಧಾನಿಕ ಪದಗಳನ್ನ ಬಳಸಿ ದೀಪಕ್ ಸಿಂಗ್ ಪೋಸ್ಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಮೋದಿಯವರನ್ನು ವೈಯಕ್ತಿಕ ನಿಂದನೆ ಮಾಡಿದ್ದಾರೆ ಎಂದು ದೂರಿದ್ದಾರೆ.
ದೀಪಕ್ ಸಿಂಗ್ ಈ ಹಿಂದೆಯೂ ಇಂತಹ ಅನೇಕ ಪೋಸ್ಟ್ ಗಳನ್ನು ಮಾಡಿದ್ದು ಅವುಗಳ ವಿರುದ್ಧವೂ ದೂರು ನೀಡಲಾಗಿತ್ತು. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿಯವರಿಗೆ ಅಹೇಳನ ಮಾಡಿರುವ ದೀಪಕ್ ಸಿಂಗ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು.ಈ ಮೂಲಕ ಕೀಳು ಅಬಿರುಚಿಯ ಟೀಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಹರಿಕೃಷ್ಣ ಎಂ.ಬಿ., ಅರುಣ್ ಶೆಟ್ಟಿ, ಜಗನ್ನಾಥ, ಸಂತೋಷ ಬಳ್ಳಕೆರೆ, ಸುಹಾಸ್ ಶಾಸ್ತ್ರಿ, ಹೃಷಿಕೇಶ ಪೈ ಮೊದಲಾದವರು ಇದ್ದರು.