Saturday, July 2, 2022

Latest Posts

ಪ್ರಧಾನಿ ಮೋದಿ, ಸಿಎಂ ಯೋಗಿ ಫೋಟೊಗಳ ಅನಧಿಕೃತ ಬಳಕೆ: ಕೇಸ್ ದಾಖಲು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮೊಬೈಲ್ ಬ್ರಾಂಡ್ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೊಗಳನ್ನು ಅನಧಿಕೃತವಾಗಿ ಬಳಸಲಾಗಿದೆ.
ಉತ್ತರ ಪ್ರದೇಶದ ಸಚಿವರ ಸಹೋದರನೊಬ್ಬ ಫೋಟೊಗಳನ್ನು ಬಳಸಿದ್ದು, ಅವರ ವಿರುದ್ಧ ಕೇಸ್ ದಾಖಲಾಗಿದೆ.
ವೃತ್ತಿಪರ ಕೌಶಲಾಭಿವೃದ್ಧಿ ರಾಜ್ಯ ಸಚಿವ ಕಪಿಲ್ ಅಗರ್ವಾಲ್ ಅವರ ಸಹೋದರ ಲಲಿತ್ ಅಗರ್ವಾಲ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಸಚಿವ ಕಪಿಲ್ ಮಾತನಾಡಿ, ನನ್ನ ಸಹೋದರನನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ನನ್ನ ಸಹೋದರ ಶೀಘ್ರ ಆರೋಪಮುಕ್ತರಾಗಲಿದ್ದಾರೆ ಎಂದಿದ್ದಾರೆ.
ಲಲಿತ್ ಅಗರ್ವಾಲ್ ಜಾಹೀರಾತು ಏಜೆನ್ಸಿ ನಡೆಸುತ್ತಿದ್ದು, ಮೊಬೈಲ್ ಬ್ರಾಂಡ್ ಒಂದಕ್ಕೆ ಹೋರ್ಡಿಂಗ್‌ಗಳಿಗಾಗಿ ಚಿತ್ರಗಳನ್ನು ಸಂಗ್ರಹಿಸುತ್ತಿದ್ದರು. ಈ ವೇಳೆ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಅವರ ಫೋಟೊಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss