Thursday, June 30, 2022

Latest Posts

ಪ್ರಧಾನ ಅರ್ಚಕರು ಸಹಿತ 12 ಸಿಬ್ಬಂದಿಗೆ ಕೊರೋನಾ: ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಬಂದ್

ತಿರುವನಂತಪುರಂ: ಇಬ್ಬರು ಪ್ರಧಾನ ಅರ್ಚಕರು ಸಹಿತ 12 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ, ಕೇರಳದ ಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಅಕ್ಟೋಬರ್ 15ರವೆರೆಗೆ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ.
ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಅ.15ರವರೆಗೆ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಆದರೆ ಅರ್ಚಕರು ನಿತ್ಯದ ಪೂಜಾ ವಿಧಿವಿಧಾನಗಳನ್ನು ಎಂದಿನಂತೆ ನೆರವೇರಿಸಲಿದ್ದು, ಅ. 15ರವರೆಗೆ ಭಕ್ತರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss