Thursday, August 18, 2022

Latest Posts

ಕೊರೋನಾ ಸೋಂಕಿನಿಂದ ಪ್ರಪಂಚದ ಮಾರುಕಟ್ಟೆಯೇ ತಲ್ಲಣಗೊಂಡಿರುವಾಗ ಫೇಸ್‌ಬುಕ್, ಅಮೆಜಾನ್ ಸಂಸ್ಥೆಗೆ ಹಣದ ಹೊಳೆ!

ನ್ಯೂಯಾರ್ಕ್: ಮಹಾಮಾರಿ ಕೊರೋನಾ ಸೋಂಕಿನಿಂದ ಪ್ರಪಂಚದ ಮಾರುಕಟ್ಟೆಯೇ ತಲ್ಲಣಗೊಂಡಿರುವಾಗ ಎರಡು ಸಂಸ್ಥೆಗಳು ಮಾತ್ರ ಭಾರಿ ಲಾಭ ಗಳಿಸಿವೆ.
ಫೇಸ್‌ಬುಕ್ ಹಾಗೂ ಅಮೆಜಾನ್ ಸಂಸ್ಥೆಗಳು, ಕಳೆದ ಎರಡು ತಿಂಗಳ ಅವಧಿಯಲ್ಲಿ ಭರ್ಜರಿ ಹಣ ಗಳಿಸಿದೆ. ಫೋರ್ಬ್ಸ್ ಪಟ್ಟಿಯಲ್ಲಿ ಫೇಸ್‌ಬುಕ್ ಸಿಇಓ ಜುಗರ್‌ಬರ್ಗ್ ಅಮೆಜಾನ್ ಸಿಈಓ ಜೆಫ್ ಓಜೋನ್ ಹೆಸರುಗಳು ಉಲ್ಲೇಖವಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕ್ರಮವಾಗಿ ಇವರಿಬ್ಬರೂ 26 ಹಾಗೂ 35 ಬಿಲಿಯನ್ ಡಾಲರ್ ಲಾಭ ಗಳಿಸಿರುವುದು ಫೋರ್ಬ್ಸ್ ಪಟ್ಟಿಯಲ್ಲಿ ದಾಖಲಾಗಿದೆ.
ಪ್ರಪಂಚದ 198 ಕ್ಕೂ ಅಧಿಕ ದೇಶಗಳಲ್ಲಿ ಕೊರೋನಾ ಸೋಂಕಿದ್ದು, ಬಹುತೇಕ ಕಡೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ವೇಳೆಯಲ್ಲಿ ಜನತೆ ಅತಿ ಹೆಚ್ಚು ಫೇಸ್‌ಬುಕ್ ಮತ್ತು ಅಮೆಜಾನ್‌ಗೆ ಶರಣಾಗಿರುವುದರಿಂದ ಈ ಎರಡು ಪ್ರಮುಖ ಕಂಪನಿಗಳು ಲಾಭವನ್ನು ಬಾಚುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!